ರಾಯಚೂರು : ಜಿಲ್ಲೆಯನ್ನು ಸತತವಾಗಿ ಕಾಡುತ್ತಿರುವ ಬರಗಾಲ ಕಳೆದ ಎರಡು ದಶಕಗಳಲ್ಲಿ ಬತ್ತದ ಹಳ್ಳವನ್ನು ಈ ಬಾರಿ ಖಾಲಿ ಮಾಡಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ-ಜಂಬಲದಿನ್ನಿ ಹಳ್ಳ ಯಾವುದೇ ಬರಗಾಲಕ್ಕೂ ಜಗ್ಗಿರಲಿಲ್ಲ. ಆದ್ರೆ, ಈ ಬಾರಿ ಹಳ್ಳದಲ್ಲಿ ನೀರಿಲ್ಲ. ಪರಿಣಾಮ ಹಳ್ಳ ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತಿರುವ ಜೊತೆಗೆ ಜನ ಜಾನುವಾರುಗಳಿಗೆ ಜೀವಜಲದ ಸಮಸ್ಯೆ ಉದ್ಭವಿಸಿದೆ.
ಈ ಹಳ್ಳ ಗಲಗ, ಮುಂಡರಗಿ, ಹುಲಿಗುಡ್ಡ, ಪರಪುರ ಗ್ರಾಮಗಳ ಜನರಿಗೆ ನೀರು ಒದಗಿಸುತ್ತಿತ್ತು.ಭೀಕರ ಬರಗಾಲದ ಕಾರಣ ಕಳೆದ ಎರಡು ದಶಕಗಳಿಂದ ಬತ್ತದ ಅಮರಾಪುರ-ಜಂಬಲದಿನ್ನಿ ಹಳ್ಳ ಬತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.