ETV Bharat / state

ಪ್ರೀತ್ಸೋದ್‌ ತಪ್ಪೆಂದ ಹುಡುಗಿ ಮನೆಯವರು.. ಕೊನೆಗೆ ಹುಡುಗನ ಮನೆಯ ನಾಲ್ವರನ್ನ ಹತ್ಯೆಗೈದರು..

ಪ್ರೀತ್ಸೋದ್‌ ತಪ್ಪಾ.. ಖಂಡಿತಾ ತಪ್ಪಲ್ಲ. ಆದರೆ, ಪ್ರೀತಿ ಮಾಡಿ ಯುವಕ-ಯುವತಿ ಮದುವೆಯಾಗಿದ್ರೇ, ಇಬ್ಬರನ್ನೂ ಹಾರೈಸೋಕಾಗದಿದ್ರೂ ಚಿಂತೆ ಇಲ್ಲ. ಅವರನ್ನ ಅವರ ಪಾಡಿಗೆ ಬಿಡದೇ, ಯುವತಿಯ ಕಡೆಯವರು ಯುವಕನ ಮನೆಯ ನಾಲ್ವರನ್ನ ಹತ್ಯೆಗೈದಿದ್ದಾರೆ. ಇವರೆಂಥಾ ಕ್ರೂರಿಗಳು..

ನಾಲ್ವರ ಹತ್ಯೆ
ನಾಲ್ವರ ಹತ್ಯೆ
author img

By

Published : Jul 11, 2020, 7:24 PM IST

Updated : Jul 11, 2020, 8:18 PM IST

ರಾಯಚೂರು : ಪ್ರೀತಿ ವಿವಾಹಕ್ಕೆ ಸಂಬಂಧಿಸಿದಂತೆ ಯುವಕನ ಮನೆಯ ನಾಲ್ವರು ಸದಸ್ಯರನ್ನು ಯುವತಿಯ ಕಡೆಯವರು ಬರ್ಬರವಾಗಿ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿನ ಸುಂಕಾಲಪೇಟೆಯಲ್ಲಿ ನಡೆದಿದೆ.

ಹುಡುಗನ ಕಡೆಯ ನಾಲ್ವರ ಬರ್ಬರ ಹತ್ಯೆ.. ಪ್ರೀತ್ಸೋದ್‌ ತಪ್ಪಾ?

ಸುಂಕಾಲಪೇಟೆ ನಿವಾಸಿಗಳಾದ ಮೌನೇಶ್, ಮಂಜುಳಾ ಇಬ್ಬರು ಪರಸ್ಪರ ಪ್ರೀತಿಸಿ ಕೆಲ ತಿಂಗಳ ಹಿಂದೆ ವಿವಾಹವಾಗಿದ್ದರು. ವಿವಾಹದ ಬಳಿಕ ಮಂಜುಳಾ ತನ್ನ ಪತ್ನಿಯೊಂದಿಗೆ ತವರು ಮನೆಗೆ ತೆರಳಿದ್ದಾಳೆ. ಈ ವೇಳೆ ಮಂಜುಳಾ ಕುಟುಂಬಸ್ಥರು, ಮಗಳಿಗೆ ಮತ್ತು ಮೌನೇಶ್‌ಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ಗಾಬರಿಗೊಂಡ ಮಂಜುಳಾ ಮತ್ತು ಮೌನೇಶ್ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಈ ವಿಷಯ ತಿಳಿದ ಮಂಜುಳಾ ಕುಟುಂಬಸ್ಥರು ಮೌನೇಶ್ ಮನೆಗೆ ದಾಳಿ ಮಾಡಿದ್ದಾರೆ. ಮನೆಯಲ್ಲಿದ್ದ ಸಿಕ್ಕ ಸಿಕ್ಕ ವಸ್ತುಗಳಿಂದ ಮೌನೇಶ್ ಕುಟುಂಬದವರನ್ನು ಹತ್ಯೆ ಮಾಡಿದ್ದಾರೆ.

ಈ ಘಟನೆಯಲ್ಲಿ ಸುಮಿತ್ರಮ್ಮ(55), ಶ್ರೀದೇವಿ (30), ಹನುಮೇಶ್ (40) ಹಾಗೂ ನಾಗರಾಜ್ (38) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈರಪ್ಪ, ರೇವತಿ ಹಾಗೂ ತಾಯಮ್ಮ ಎಂಬುೂವರು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆಂದು ಚಿಕಿತ್ಸೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿದವರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯಿಂದ ಸಿಂಧನೂರು ಜನತೆ ಬೆಚ್ಚಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬೀಡು ಬಿಟ್ಟಿದ್ದಾರೆ. ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Jul 11, 2020, 8:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.