ರಾಯಚೂರು: ಕೃಷ್ಣಾ ನದಿಗೆ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ರಾಯಚೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಶಕ್ತಿನಗರ(ದೇವಸೂಗೂರು) 2ನೇ ಕ್ರಾಸ್ ಹತ್ತಿರವಿರುವ ಕೃಷ್ಣ ಬ್ರೀಡ್ಜ್ ಬಳಿ ಘಟನೆ ಸಂಭವಿಸಿದೆ. ನಗರದ ಗಾಲಿಬ್ ಬಡವಣೆಯ ಶೇಖ್ ರಿಜ್ವಾನ್(52) ಮೃತ ವ್ಯಕ್ತಿ.
ಕೃಷ್ಣ ಬ್ರಿಡ್ಜ್ ಮೇಲಿನಿಂದ ನದಿಗೆ ಹಾರಿದ್ದಾನೆ. ಇದರ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಘಟನೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಶಕ್ತಿನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ತನಿಖೆ ನಂತರ ಸಾವಿಗೆ ಕಾರಣ ತಿಳಿದು ಬರಲಿದೆ ಅಂತಾರೆ ಪೊಲೀಸ್ ಇಲಾಖೆಯ ಅಧಿಕಾರಿಗಳು.