ರಾಯಚೂರು : ಟ್ರ್ಯಾಕ್ಟರ್ ಹಾಯ್ದು ವ್ಯಕ್ತಿಯೊಬ್ಬ ದಾರುಣವಾಗಿ ಸ್ವಾನ್ನಪ್ಪಿರುವ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಸಿಂಧನೂರು-ಗಂಗಾವತಿ ರಸ್ತೆಯ ಐಬಿ ಬಳಿ ಈ ದುರ್ಘಟನೆ ನಡೆದಿದೆ.
ಕೆ.ಬಸಾಪುರ ಗ್ರಾಮದ ಹನುಮೇಶ ಮಡಿವಾಳಪ್ಪ(48) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ. ಗಂಗಾವತಿ ರಸ್ತೆ ಕಡೆಯಿಂದ ಸಿಂಧನೂರು ಪಟ್ಟಣಕ್ಕೆ ಬರುತ್ತಿದ್ದ ಮರಳು ತುಂಬಿದ ಟ್ರ್ಯಾಕ್ಟರ್ ಹನುಮೇಶ್ ಮೇಲೆ ಹಾಯ್ದ ಪರಿಣಾಮ ತೀವ್ರ ಸ್ವರೂಪ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಓದಿ:40 ಲಕ್ಷಕ್ಕಾಗಿ ಪತಿಯನ್ನೇ ಕಿಡ್ನಾಪ್ ಮಾಡಿಸಿದ ಪತ್ನಿ.. ಕೊನೆಗೆ ಆಗಿದ್ದೇನು..?
ಘಟನೆ ಸಂಬಂಧಿಸಿದಂತೆ ಮೃತನ ಪತ್ನಿ ಶಾರದಾ ಸಿಂಧನೂರು ಸಂಚಾರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಅಕ್ರಮವಾಗಿ ಮರಳುಗಾರಿಕೆ ನಡೆಸುವ ಟ್ರ್ಯಾಕ್ಟರ್ಗಳು ವೇಗವಾಗಿ ಚಲಿಸುತ್ತಿರುವುದರಿಂದ ಇಂಥ ಘಟನೆಗಳು ನಡೆಯುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ಟ್ರ್ಯಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.