ರಾಯಚೂರು: ಕೃಷಿ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ರಾಜಶೇಖರ್ ಕಟ್ಟಿಮನಿ ಎಂಬುವರು ತಮ್ಮ 9 ತಿಂಗಳ ಮಗು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
9 ತಿಂಗಳ ಮಗು Acute Myeloid Leukemia ಎಂಬ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಾರಾಯಣ ಹೃದಯಾಲಯಕ್ಕೆ ಕರೆದೊಯ್ಯಬೇಕಿದೆ. ಮಜುಲ್ದಾರ ಶಾ ಮೆಡಿಕಲ್ ಸೆಂಟರ್ನಲ್ಲಿ 1 ತಿಂಗಳಿನಿಂದ ಮಗುವನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗಾಗಿ ಸಾಲ ಮಾಡಿ ಒಂದು ಲಕ್ಷ ರೂಪಾಯಿ ವ್ಯಯ ಮಾಡಿದ್ದಾರೆ.
ವೈದ್ಯರು ಚಿಕಿತ್ಸೆಗೆ 15 ಲಕ್ಷ ರೂಪಾಯಿ ಆಗಲಿದೆ ಎಂದು ತಿಳಿಸಿದ್ದಾರೆ. ವೈದ್ಯರು ಹೇಳುವ ವೆಚ್ಚ ಭರಿಸಲು ಸಾಧ್ಯವಾಗದ ಹಿನ್ನೆಲೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ತಮಗೆ ದಾನಿಗಳು ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾರೆ.
- ವಿವರ:
-ಬ್ಯಾಂಕ್ ಖಾತೆದಾರರ ಹೆಸರು : ರಾಜಶೇಖರ್
-ಬ್ಯಾಂಕ್ ಖಾತೆ ಸಂಖ್ಯೆ :31233401145
-ಐಎಫ್ಎಸ್ಇ ಕೋಡ್ : SBIN0015648
-ಬ್ರಾಂಚ್: ಭಾರತೀಯ ಸ್ಟೇಟ್ ಬ್ಯಾಂಕ್, ಸ್ಟೇಷನ್ ರೊಡ್, ರಾಯಚೂರು
-ಯುಪಿಐ ಪಾವತಿಗಾಗಿ: ಗೂಗಲ್-ಪೇ ಅಥವಾ ಫೊನ್-ಪೇ ಮೂಲಕ ಹಣವನ್ನು ಕಳುಹಿಸಬಹುದು. ಮೊಬೈಲ್ ಸಂಖ್ಯೆ 9972314666.