ರಾಯಚೂರು: ನವೋದಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ನಿಗೂಢ ಸಾವಿನ ಪ್ರಕರಣ ಸಂಬಂದ ರಾಜ್ಯದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
ನಿರ್ಭಯ ಮಾದರಿಯಲ್ಲಿ ಪ್ರಕರಣದ ತಿರುವು ಪಡೆಯುತ್ತಿದ್ದು ವಿದ್ಯಾರ್ಥಿಗಳು, ಯುವಕರು ಪ್ರಗತಿಪರ ಸಂಘಟನೆಗಳಿಂದ ಮಾತ್ರವಲ್ಲದೇ ಸ್ಯಾಂಡಲ್ವುಡ್ನಿಂದಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಕೆಲ ಪ್ರಗತಿ ಪರ ಮಹಿಳಾ ಹೋರಾಟಗಾರರ ಹಾಗೂ ವಕೀಲೆಯರು ಈ ಟಿವಿ ಭಾರತ್ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಸಾವಿನ ಪ್ರಕರಣ ಹಲವು ತಿರುವು ಪಡೆಯುತ್ತಿದ್ದು, ನಾಗರಿಕರ ಸಮಾಜ ತಲೆ ತಗ್ಗಿಸುವಂತಹದ್ದು. ಈ ಘನ ಘೊರ ಕೃತ್ಯಕ್ಕೆ ಕಾರಣರಾದ ಆರೋಪಿಗೆ ಕಠಿಣ ಶಿಕ್ಷೆಯಾಗುವುದರ ಜೊತೆಗೆ ಇಂಥಾ ಕೃತ್ಯಗಳು ಜರುಗದಂತೆ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಮಹಿಳೆಯರು ಎದೆಗುಂದಬಾರದು, ಅನ್ಯಾಯ ಕಂಡುಬಂದಲ್ಲಿ ನಿರ್ಭಯವಾಗಿ ಹೋರಾಟಕ್ಕೆ ಮುಂದಾಗಬೇಕು ಹಾಗೂ ಸಂಘಟಿತರಾಗಿ ಎದುರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.