ರಾಯಚೂರು: ಇಂದಿನಿಂದ ಸಾರ್ವಜನಿಕರಿಗೆ ಮಂದಿರ - ಮಸೀದಿಗಳಿಗೆ ತೆರಳಲು ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ಮಾಸ್ಕ್ ಧರಿಸಿ ಪ್ರಾರ್ಥನೆ ಸಲ್ಲಿಸಿದರು.
ನಗರದ ಶಮಶಾಲಂ ದರ್ಗಾದಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಸಲ್ಲಿಸಲು ಬರುವವರು ಸರಕಾರದ ಮಾರ್ಗ ಸೂಚಿಯಂತೆ ನಮಾಜ್ ಮಾಡುವಾಗ ಕೆಳಗಡೆ ಹಾಕಿಕೊಳ್ಳಲು ಬಟ್ಟೆ ವೈಯಕ್ತಿಯವಾಗಿ ತೆಗೆದುಕೊಂಡು ಬರಬೇಕು, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಹಾಗೂ ಒಂದು ಬಾರಿಗೆ 10 ಜನರಿಗೆ ಪ್ರಾರ್ಥನೆ ಅನುವು ಮಾಡಿಕೊಟ್ಟಿದ್ದು, ಸರಕಾರದ ಮಾರ್ಗ ಸೂಚಿಯಂತೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇನ್ನು ಜಿಲ್ಲೆಯ ದೇವಾಲಯಗಳು ಬಾಗಿಲು ತೆರದಿದ್ದು, ಭಕ್ತರು ದೇವಾಲಯಗಳಿಗೆ ತೆರಳಿ ದರ್ಶನ ಪಡೆದುಕೊಂಡರು. ಇಂದಿನಿಂದ ದರ್ಶನಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ನಿನ್ನೆಯೇ ಎಲ್ಲ ದೇವಾಲಯಗಳಲ್ಲಿ ಸ್ಯಾನಿಟೈಸರ್ ಮಾಡಿ, ಸ್ವಚ್ಚತೆ ಮಾಡಿಕೊಳ್ಳಲಾಯಿತು. ಇಂದು ದೇಗುಲಕ್ಕೆ ಬರುವ ಭಕ್ತರಿಗೆ ಸ್ಯಾನಿಟೈಸರ್ ಉಪಯೋಗಿಸುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಾರ್ಕ್ ಹಾಕಿದ್ದು, ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದುಕೊಂಡರು.