ETV Bharat / state

ಕೊರೊನಾದಿಂದ ಮುಕ್ತಗೊಂಡ ತಲಮಾರಿ ಗ್ರಾಮ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು - Raichur covid cases update

ಜುಲೈ ತಿಂಗಳಲ್ಲಿ ತಲಮಾರಿ ಗ್ರಾಮದಲ್ಲಿ ನಡೆದ ಐದು ಮದುವೆಗಳಿಂದ ಬರೋಬ್ಬರಿ 72 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ, ಈಗ ಜಿಲ್ಲಾಡಳಿತದ ದಿಟ್ಟ ಕ್ರಮದಿಂದಾಗಿ ಕೊರೊನಾ ಮುಕ್ತ ಗ್ರಾಮವಾಗಿದೆ.

Talamari village free from Corona
Talamari village free from Corona
author img

By

Published : Aug 27, 2020, 4:04 PM IST

ರಾಯಚೂರು: ತಾಲೂಕಿನ ತಲಮಾರಿ ಗ್ರಾಮದಲ್ಲಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿತ್ತು. ಆದರೆ, ಜಿಲ್ಲಾಡಳಿತದ ದಿಟ್ಟ ಕ್ರಮದಿಂದಾಗಿ ಇದೀಗ ಕೊರೊನಾ ಮುಕ್ತ ಗ್ರಾಮವಾಗಿದೆ.

ಜುಲೈ ತಿಂಗಳಲ್ಲಿ ಗ್ರಾಮದಲ್ಲಿ ನಡೆದ ಐದು ಮದುವೆಗಳಿಂದ ಬರೋಬ್ಬರಿ 72 ಜನರಲ್ಲಿ ಸೋಂಕು ಕಾಣಿಸಿಕೊಂಡಿತು. ಸುಮಾರು ಐದು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ನಿತ್ಯ ಕೊರೊನಾ ಸೋಂಕಿತ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದವು. ಒಂದೇ ದಿನ 30 ಜನರಿಗೆ ಸೋಂಕು ದೃಢಪಟ್ಟ ನಂತರ ಸೊಂಕು ನಿಯಂತ್ರಿಸಬೇಕೆಂದು ತೀರ್ಮಾನಿಸಿದ ಜಿಲ್ಲಾಡಳಿತ, ಪ್ರತ್ಯೇಕವಾಗಿ ಲಾಕ್ ಡೌನ್ ಘೋಷಣೆ ಮಾಡಿ ಗ್ರಾಮಕ್ಕೆ ಹೊರಗಿನವರು ಬಾರದಂತೆ, ಗ್ರಾಮದಿಂದ ಹೊರಗಡೆ ಯಾರೂ ಹೋಗದಂತೆ ಕಠಿಣ ಕ್ರಮ‌ ಕೈಗೊಂಡಿತ್ತು.

ಜೊತೆಗೆ ಗ್ರಾಮದಲ್ಲಿ ವಯಸ್ಸಾದವರ ಗಂಟಲು ದ್ರವ ಪರೀಕ್ಷೆ ಮಾಡಿ, ಜಿಲ್ಲಾ‌ ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಂಡು ಕೊರೊನಾ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.