ರಾಯಚೂರು : ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ನಿರ್ಮೂಲನೆಗೆ ಆಗ್ರಹಿಸಿ ಪದವಿ ವಿದ್ಯಾರ್ಥಿಯೋರ್ವ ಅಖಂಡ ರಾಜ್ಯದ ಸೈಕ್ಲಿಂಗ್ ಯಾತ್ರೆ ಕೈಗೊಂಡಿದ್ದಾನೆ.
ಬೆಂಗಳೂರಿನ ಬನ್ನೇರುಘಟ್ಟ ಮೂಲದ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಕಿರಣ್ ಕುಮಾರ್ ಎಂಬುವರು ಸೈಕ್ಲಿಂಗ್ ಯಾತ್ರೆಯನ್ನ ಹಮ್ಮಿಕೊಂಡಿದ್ದಾರೆ. ಅಖಂಡ ಕರ್ನಾಟಕದ 31 ಜಿಲ್ಲೆಗಳ ಆಯಾ ಜಿಲ್ಲಾಧಿಕಾರಿ ಕಚೇರಿಗೆ ಸೈಕಲ್ನಲ್ಲಿ ತೆರಳಿ ಮನವಿ ಪತ್ರ ಸಲ್ಲಿಸಿ,ಅತ್ಯಾಚಾರ ನಿರ್ಮೂಲನೆಗೊಳಿಸಬೇಕೆಂದು ಒತ್ತಾಯಿಸಲಿದ್ದಾರೆ.
ದೇಶದಲ್ಲಿ ಮಹಿಳೆಯರ ಮೇಲೆ ಯಥೇಚ್ಛವಾಗಿ ಕಿರುಕುಳ, ಅತ್ಯಾಚಾರ, ಹಿಂಸೆ, ದೌರ್ಜನ್ಯ ಪ್ರಕರಣ ನಡೆಯುತ್ತಿವೆ. ಇಂತಹ ಹೇಯ ಕೃತ್ಯಗಳ ಮೇಲೆ ಕಡಿವಾಣ ಹಾಕಬೇಕಾಗಿದೆ. ಇದಕ್ಕಾಗಿ ಕಳೆದ 2021ರ ಆಗಸ್ಟ್ 22ರಿಂದ ಸೈಕಲ್ ಜಾಥಾ ನಡೆಸುತ್ತಿದ್ದಾನೆ. ಈಗಾಗಲೇ 7 ಜಿಲ್ಲೆಗಳಿಗೆ ಭೇಟಿ ನೀಡಿ ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾನೆ.
ಇಂದು ರಾಯಚೂರು ನಗರಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ್ದಾನೆ. ಈ ವೇಳೆ ಸ್ಥಳೀಯ ಸಂಘಟನೆಗಳು ಸಾಥ್ ನೀಡಿದ್ದು, ಮಹಿಳಾ ಹೋರಾಟಗಾರರು ಹೂ ಮಾಲೆ ಹಾಕಿ, ಜಾಥಾ ಯಶ್ವಸಿಯಾಗಲಿ ಎಂದು ಶುಭಕೋರಿದ್ದಾರೆ.