ರಾಯಚೂರು: ಕೃಷ್ಣಾ ನದಿ ನೀರು ಬಿಡುಗಡೆ ಹಿನ್ನೆಲೆ ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್‌ಗಳನ್ನು ತೆರೆಯಲು ಹರಸಾಹಸ ಪಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಜೆಸಿಬಿಯ ಬಕೆಟ್‌ನಲ್ಲಿ ಕಾರ್ಮಿಕ ಸುರಕ್ಷಾ ಕವಚಗಳೊಂದಿಗೆ ಕುಳಿತು ಗೇಟ್ ತೆರೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ನೀರಿನ ಹರಿವು ಹೆಚ್ಚಾಗಿರುವುದಿಂದ ಗೇಟ್ ಓಪನ್ ಮಾಡಲು ಆಗುತ್ತಿಲ್ಲ. ಶನಿವಾರ ಕೂಡ ಕ್ರೇನ್ ಮೂಲಕ ಗೇಟ್ ತೆರೆಯುವ ವಿಫಲ ಪ್ರಯತ್ನ ಮಾಡಿದ್ದರು.
ಗುರ್ಜಾಪುರ ಬ್ಯಾರೇಜ್ನಲ್ಲಿ ಒಟ್ಟು 194 ಗೇಟ್ಗಳಿವೆ. ಈ ಪೈಕಿ 94 ಗೇಟ್ ಓಪನ್ ಮಾಡಲಾಗಿದೆ. ಇದರಿಂದ ನೀರು ಹೋಗುತ್ತಿವೆ. ಆದರೆ ನಾರಾಯಣಪುರ ಜಲಾಶಯದಿಂದ 1.68 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬಿಡಲಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದ ನೀರು ನದಿಗೆ ಬರುತ್ತಿದೆ. ಮುಂಜಾಗ್ರತಾ ಕ್ರಮ ಅಧಿಕಾರಿಗಳಿಗೆ ಬ್ಯಾರೇಜ್‌ನ ಎಲ್ಲಾ ಗೇಟ್‌ಗಳ ಓಪನ್ ಮಾಡದೆ ನಿರ್ಲಕ್ಷ್ಯವಹಿಸಿದೆ ಪರಿಣಾಮ ಇನ್ನುಳಿದ 100 ಗೇಟ್ಗಳು ಓಪನ್ ಮಾಡಲು ಹರಸಹಾಸ ಪಡುವಂತಾಗಿದೆ.
ಬ್ಯಾರೇಜ್ ಮುಳಗಡೆಯಾಗುವ ಭೀತಿ ಎದುರಾಗಿದ್ದು, ಗುರ್ಜಾಪುರ ಗ್ರಾಮಕ್ಕೆ ಬ್ಯಾರೇಜ್ ಹಿನ್ನೀರು ನುಗ್ಗುವ ಆತಂಕ ಶುರುವಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಗೇಟ್‌ಗಳನ್ನು ಓಪನ್ ಮಾಡಿದರೆ ಇಂತಹ ಆತಂಕವಿರುತ್ತಿರಲಿಲ್ಲ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಇಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಇದನ್ನೂ ಓದಿ : ಕಾಫಿನಾಡಿನಲ್ಲಿ ಮಳೆ ಅವಾಂತರ: ಮನೆಗಳು ಕುಸಿತ, ಹೊಳೆಯಲ್ಲಿ ತೇಲಿ ಹೋಗುತ್ತಿರುವ ಶವ!