ETV Bharat / state

ನಿಂತಿದ್ದ ಲಾರಿಗೆ ಆ್ಯಂಬುಲೆನ್ಸ್​ ಡಿಕ್ಕಿ: ಸ್ಟಾಫ್​ ನರ್ಸ್​ ಸ್ಥಳದಲ್ಲೇ ಸಾವು

ನಿಂತಿದ್ದ ಲಾರಿಗೆ ಆ್ಯಂಬುಲೆನ್ಸ್​ ಡಿಕ್ಕಿ ಹೊಡೆದ ಪರಿಣಾಮ ಸ್ಟಾಫ್​ ನರ್ಸ್​ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ambulance driver dies in a accident
ಆ್ಯಂಬುಲೆನ್ಸ್​​ಗೆ ಲಾರಿ ಡಿಕ್ಕಿ ಸುದ್ದಿ
author img

By

Published : Dec 4, 2020, 8:55 AM IST

ಲಿಂಗಸುಗೂರು: ಗರ್ಭಿಣಿ ಮಹಿಳೆಯನ್ನು ಕರೆ ತರಲು ತೆರಳುತ್ತಿದ್ದ 108 ಆ್ಯಂಬುಲೆನ್ಸ್ ಲಾರಿಗೆ ಡಿಕ್ಕಿಯಾಗಿ ಸ್ಟಾಫ್ ನರ್ಸ್ ಸ್ಥಳದಲ್ಲೇ ಸಾವನ್ನಪ್ಪಿರುವ ಪ್ರಕರಣ ರಾಯಚೂರು ಜಿಲ್ಲೆ ಲಿಂಗಸುಗೂರ ತಾಲೂಕಿನ ಸರ್ಜಾಪುರ ಬಳಿ ಗುರುವಾರ ಮಧ್ಯರಾತ್ರಿ ನಡೆದಿದೆ.

ambulance driver dies in a accident
ಸ್ಟಾಫ್​ ನರ್ಸ್​ ಸಾವು

ಯಾವುದೇ ಸೂಚನೆ ನೀಡದೇ ಇಂಡಿಕೇಟರ್ ಹಾಕದೆ ನಿಲ್ಲಿಸಿದ್ದ ಲಾರಿಗೆ ಆ್ಯಂಬುಲೆನ್ಸ್​ ಡಿಕ್ಕಿಯಾಗಿದ್ದರಿಂದ ಸ್ಟಾಫ್ ನರ್ಸ್ ಸಂಗಮೇಶ ಬಳಿಗಾರ (30) ಮೃತರಾಗಿದ್ದಾರೆ.

ಪಾಮನಕೆಲ್ಲೂರಿನಲ್ಲಿನ ಗರ್ಭಿಣಿ ಮಹಿಳೆ ಕರೆತರಲು ಲಿಂಗಸುಗೂರಿನಿಂದ ಆ್ಯಂಬುಲೆನ್ಸ್​ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆ್ಯಂಬುಲೆನ್ಸ್​ ಚಾಲಕ ಹನುಮಂತ ನೀಡಿದ ದೂರಿನ ಮೇಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.