ಲಿಂಗಸುಗೂರು: ಪ್ರೀತಿಸಿ ಮದುವೆ ಆದ ಎರಡು ತಿಂಗಳಲ್ಲೇ ವಿವಾಹ ವಿಚ್ಛೇದನ ಕೊಡುವಂತೆ ಪೀಡಿಸಿದ್ದಕ್ಕೆ ಬೇಸತ್ತ ಸ್ಟಾಫ್ ನರ್ಸ್ ರೇಷ್ಮಾ ಕೊರಬು (32) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲಿಂಗಸುಗೂರು ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ರೇಷ್ಮಾ ಹಟ್ಟಿ ಪಟ್ಟಣದ ಇಬ್ರಾಹಿಂ ಎಂಬುವವರನ್ನು ಪ್ರೀತಿಸಿ ಮದುವೆ ಆಗಿದ್ದರು. ಮದುವೆ ನಂತರದಲ್ಲಿ ಎರಡು ತಿಂಗಳಿಂದ ಗಂಡ ಇಬ್ರಾಹಿಂ ಮತ್ತು ಕುಟುಂಬಸ್ಥರು ವಿಚ್ಛೇದನ ನೀಡುವಂತೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಮೃತಳ ಸಹೋದರ ಜಾವೀದ್ ದೂರಿನ ಮೇಲೆ 8 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.