ETV Bharat / state

ರಾಯಚೂರು ಜಿಲ್ಲೆಯ ಚುನಾವಣಾ ಐಕಾನ್​ ಆಗಿ ಖ್ಯಾತ ನಿರ್ದೇಶಕ ರಾಜಮೌಳಿ ಆಯ್ಕೆ

ರಾಯಚೂರು ಜಿಲ್ಲೆಯ ಚುನಾವಣಾ ಐಕಾನ್​ ಆಗಿ ಖ್ಯಾತ ನಿರ್ದೇಶಕ ರಾಜಮೌಳಿ ಅವರನ್ನು ಚುನಾವಣಾ ಆಯೋಗ ಆಯ್ಕೆ ಮಾಡಿದೆ.

ಎಸ್​ ಎಸ್​  ರಾಜಮೌಳಿ
ಎಸ್​ ಎಸ್​ ರಾಜಮೌಳಿ
author img

By

Published : Mar 9, 2023, 2:21 PM IST

Updated : Mar 9, 2023, 5:31 PM IST

ರಾಯಚೂರು ಜಿಲ್ಲಾಧಿಕಾರಿ

ರಾಯಚೂರು: 2023ರ ವಿಧಾನಸಭಾ ಚುನಾವಣೆಗೆ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.​ಎಸ್. ರಾಜಮೌಳಿಯವರನ್ನು ರಾಜ್ಯ ಚುನಾವಣಾ ಆಯೋಗ ರಾಯಚೂರು ಜಿಲ್ಲೆಯ ಚುನಾವಣಾ ಐಕಾನ್​ ಆಗಿ ನೇಮಕ ಮಾಡಿ ಆದೇಶ ಮಾಡಿದೆ. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕ್ರೀಡಾಪಟುಗಳು, ಚಲನಚಿತ್ರ ನಿರ್ದೇಶಕರು, ನಟರು ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವವ ಪ್ರತಿಷ್ಠಿತರನ್ನು ಚುನಾವಣಾ ಪ್ರಚಾರದ ಐಕಾನ್​ ಆಗಿ ನೇಮಕ ಮಾಡುತ್ತದೆ. ರಾಯಚೂರು ಜಿಲ್ಲೆಯ ಚುನಾವಣಾ ಐಕಾನ್ ಆಗಿ ನಿರ್ದೇಶಕ ರಾಜಮೌಳಿ ಅವರ ಹೆಸರನ್ನು ನೇಮಕ ಶಿಫಾರಸು ಮಾಡಲಾಗಿತ್ತು.

ಈ ಬಗ್ಗೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್​ ಮಾತನಾಡಿ, ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿಯವರನ್ನು ರಾಯಚೂರು ಜಿಲ್ಲೆಯ ಚುನಾವಣಾ ಐಕಾನ್ ಆಗಿ ಆಯ್ಕೆ ಮಾಡಲಾಗಿದೆ. ಅವರು ಮೂಲತಃ ರಾಯಚೂರು ಜಿಲ್ಲೆಯ‌ ಮಾನವಿ ತಾಲೂಕಿನ ಅಮರೇಶ್ವರ ಕ್ಯಾಂಪ್‌ನವರಾಗಿದ್ದು ಜಿಲ್ಲೆಯ ಚುನಾವಣೆ ಐಕಾನ್ ಆಗಿ ಆಯ್ಕೆ ಮಾಡಲಾಗಿದೆ. ಚುನಾವಣೆ ಮತದಾನ ಕುರಿತು ಜಾಗೃತಿ ಮೂಡಿಸಲು ನಿಟ್ಟಿನಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೇ ಇವರನ್ನು ಜನರು ಸುಲಭವಾಗಿ ಗುರುತಿಸುತ್ತಾರೆ. ನಿರ್ದೇಶಕ ಎಸ್.ಎಸ್.ರಾಜಮೌಳಿ ಕೂಡ ಸಮ್ಮತಿಸಿ ಒಪ್ಪಿಕೊಂಡಿದ್ದಾರೆ.

ಓದಿ: ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ತಾರೆ: ಶಾಸಕ ಪುಟ್ಟರಾಜು

ಐಕಾನ್​ ಆಗಿ ಆಯ್ಕೆ ಮಾಡಿರುವವರ ಮುಖ್ಯ ಕಾರ್ಯ ಮತದಾನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅದರ ಬಗ್ಗೆ ಜನರಿಗೆ ವಿಡಿಯೋ ಮುಖಾಂತರ ಸಂದೇಶ ರವಾನಿಸುವುದು ಆಗಿರುತ್ತದೆ. ಚುನಾವಣಾ ಆಯೋಗ ಸೂಚಿಸಿದಂತೆ ಅವರ ವಿಡಿಯೋ ಮೂಲಕ ಜನರಗೆ ಜಾಗೃತಿ ಸಾರಬೇಕಾಗುತ್ತದೆ. ಇದರಲ್ಲಿ ಯಾವುದೇ ಪಕ್ಷಗಳಿಗೆ ಬೆಂಬಲಿಸುವಂತಹ ಸಂದೇಶ ಇರುವುದಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ಕ್ರೀನ್ ರೈಟರ್ ಹಾಗೂ ಚಿತ್ರಸಂಭಾಷಣೆಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಓದಿ: ಜನಾರ್ದನ ರೆಡ್ಡಿ ಆಸ್ತಿ ವಿವರ ಕೋರಿ 4 ದೇಶಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಮನವಿ

ನಿರ್ದೇಶಕ ರಾಜಮೌಳಿ ಒಂದರ ಹಿಂದೊಂದರಂತೆ ಹಿಟ್​ ಮೂವಿಗಳನ್ನು ನೀಡುತ್ತಾ ಬಂದಿದ್ದು ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಗುರುತಿಸಿಕೊಂಡಿದ್ದಾರೆ. ಇವರ ನಿರ್ದೇಶನದ ಬಾಹುಬಲಿ ಚಿತ್ರ ಸೂಪರ್ ಹಿಟ್​ ಪ್ಯಾನ್​ ಇಂಡಿಯಾ ಸಿನಿಮಾವಾಗಿ ಹೊರಹೊಮ್ಮಿತ್ತು. ಅಲ್ಲದೇ ಹೆಚ್ಚಿನ ಗಳಿಕೆ ಮಾಡಿದ ಚಿತ್ರಗಳ ಪಟ್ಟಿಗೂ ಸೇರ್ಪಡೆಗೊಂಡಿತ್ತು. ತದನಂತರ ಕಳೆದ ವರ್ಷ ತೆರೆಕಂಡ ಆರ್​ ಆರ್​ ಆರ್ ಪ್ಯಾನ್​ ಇಂಡಿಯಾ​ ಚಿತ್ರವು ದೊಡ್ಡಮಟ್ಟದ ಯಶಸ್ಸು ಕಂಡಿದೆ. ಚಿತ್ರದ ನಾಟು ನಾಟು ಹಾಡು ಆಸ್ಕರ್​ ರೇಸ್​ಗೂ ಲಗ್ಗೆ ಇಟ್ಟಿತ್ತು. ಇದೇ ಹಾಡಿಗೆ ಗೋಲ್ಡ್​ನ ಗ್ಲೋಬ್​ ಪ್ರಶಸ್ತಿಯೂ ಲಭಿಸಿತ್ತು. ಈವರೆಗೂ ರಾಜಮೌಳಿ ನಿರ್ದೇಶಿರುವ ಎಲ್ಲ ಚಿತ್ರಗಳೂ ಯಶಸ್ಸು ಕಂಡಿವೆ.

ಇದನ್ನೂ ಓದಿ: ಜನಾರ್ದನ ರೆಡ್ಡಿ ಆಸ್ತಿ ವಿವರ ಕೋರಿ 4 ದೇಶಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಮನವಿ

Last Updated : Mar 9, 2023, 5:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.