ರಾಯಚೂರು: ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ರಾಯಚೂರಿಗೆ ಸಂಜೆ ಆಗಮಿಸಲಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡುವ ಹಿನ್ನೆಲೆ ದಿಢೀರನೆ ಸ್ವಚ್ಛತಾ ಕಾರ್ಯಗಳು ನಡೆಯುತ್ತಿವೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾದ ನಂತರ ಮೊದಲ ಬಾರಿಗೆ ಆಗಮಿಸುತ್ತಿರುವ ಅವರು, ಇಂದು ಸಂಜೆ 7 ರ ಸುಮಾರಿಗೆ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಸಚಿವರನ್ನ ಮೆಚ್ಚಿಸಲು ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ಬರದಿಂದ ಸಾಗಿದೆ.
ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ನಿತ್ಯ ಸಾವಿರಾರು ಜನರು ಜಿಲ್ಲೆಯ ನಾನಾ ಮೂಲೆಗಳಿಂದ ಬರುತ್ತಾರೆ. ಇಲ್ಲಿಗೆ ಬರುವಂತಹ ರೋಗಿಗಳಿಗೆ ಹಾಗೂ ಒಳರೋಗಿಗಳಿಗೆ ಸೌಲಭ್ಯ ಹಾಗೂ ಸರಿಯಾದ ಚಿಕಿತ್ಸೆ ನೀಡುವುದಿಲ್ಲ ಎಂಬ ಆರೋಪ ಈ ಆಸ್ಪತ್ರೆ ಮೇಲಿದೆ.