ETV Bharat / state

ಕಳ್ಳತನ ಪ್ರಕರಣದಲ್ಲಿ ಪೊಲೀಸರ ವಿರುದ್ಧ​ ಯುವಕನಿಗೆ ಥಳಿತ ಆರೋಪ: ಸ್ಪಷ್ಟನೆ ನೀಡಿದ ಎಸ್ಪಿ

ಕಳ್ಳತನ ಪ್ರಕರಣದ ವಿಚಾರಣೆ ನಡೆಸುವ ನೆಪದಲ್ಲಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯನ್ನು ಥಳಿಸಿದ್ದಾರೆ ಎಂಬ ಆರೋಪಕ್ಕೆ ಎಸ್ಪಿ ‌ವೇದಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

SP Vedamurty
author img

By

Published : Nov 3, 2019, 6:09 PM IST

ರಾಯಚೂರು: ಕಳ್ಳತನ ಪ್ರಕರಣದ ವಿಚಾರಣೆ ನಡೆಸುವ ನೆಪದಲ್ಲಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯನ್ನು ಥಳಿಸಿದ್ದಾರೆ ಎಂಬ ಆರೋಪಕ್ಕೆ ಎಸ್ಪಿ ‌ವೇದಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

ಎಸ್ಪಿ ವೇದಮೂರ್ತಿ

ನಾಲ್ಕು ತಿಂಗಳ‌ ಹಿಂದೆ ಆಂಜಿನಯ್ಯ ಎಂಬುವವರು ತಮ್ಮ ಮನೆಯಲ್ಲಿದ್ದ ಸುಮಾರು 55 ಸಾವಿರ ರೂ. ಕಳ್ಳತನವಾಗಿದ್ದು, ಭೀಮಣ್ಣ ಎಂಬುವವರು ಕಳ್ಳತನ ಮಾಡಿದ್ದಾರೆಂದು ಇಡಪನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ‌ ಆಧಾರದ ಮೇಲೆ ತಾಲೂಕಿನ ಲಿಂಗಖಾನದೊಡ್ಡಿ ಗ್ರಾಮದ ಭೀಮಣ್ಣ ಎಂಬ ಯುವಕನನ್ನು ಪೊಲೀಸರು ಠಾಣೆಗೆ ಕರೆದೊಯ್ದು ಮನ ಬಂದಂತೆ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಸ್ವತಃ ಗಾಯಾಳು ‌ಭೀಮಣ್ಣ ಹಾಗೂ ಅವರ ಸಂಬಂಧಿಕರು ಆರೋಪ ಮಾಡಿದ್ದರು.

ಆಂಜಿನನಯ್ಯ ಅವರ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸಭೆ ನಡೆಸಿ ತಪ್ಪು ಮಾಡಿಲ್ಲ ಎಂದು ಸಾಬೀತು ಮಾಡಲಾಗಿತ್ತು. ಇದಕ್ಕೆ ಆಂಜಿನಯ್ಯ ಸಹ‌ ಸುಮ್ಮನಾಗಿದ್ದರು. ಆದ್ರೆ ಇದ್ದಕ್ಕಿದ್ದಂತೆ ಈಗ ಯಾವುದೋ ಹಳೆ ದ್ವೇಷದಿಂದ ಇಡಪನೂರು ಪೊಲೀಸರಿಗೆ ಭೀಮಣ್ಣನ ವಿರುದ್ಧ ದೂರು ನೀಡಿದ್ದಾನೆ.

ಈ ಪ್ರಕರಣದ ಕುರಿತು ಎಸ್ಪಿ ವೆದಮೂರ್ತಿ ಸ್ಪಷ್ಟನೆ ನೀಡಿದ್ದು, ‌ಕಳ್ಳತನ ಮಾಡಿರುವ ಶಂಕೆ ಹಾಗೂ ದೂರಿನ ಮೇರೆಗೆ ಭೀಮಣ್ಣ ಎಂಬ ಯುವಕನ್ನನ್ನು ವಿಚಾರಣೆಗೆಂದು ಠಾಣೆಗೆ ಕರೆದು ಥಳಿಸಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಅವರಿಗೆ ಪೊಲೀಸರು ಥಳಿಸಿಲ್ಲ. ಭೀಮಣ್ಣನಿಗೆ ಥಳಿಸಿದ್ದೇ ಆದಲ್ಲಿ ಸಂಬಂಧಪಟ್ಟ ಪೊಲೀಸರ ವಿರುದ್ಧ ದೂರು ನೀಡಿದ್ದಲ್ಲಿ ತನಿಖೆ ನಡೆಸಿ ತಪ್ಪಿತಸ್ಥ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Intro:ರಾಯಚೂರು.ನ.3
ಕಳ್ಳತನ ಪ್ರಕರಣಕ್ಕೆ ಸಂಬಂಧ ವಿಚಾರಣೆ ನಡೆಸುವ ನೆಪದಲ್ಲಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯನ್ನು ಥಳಿಸಿದ್ದಾರೆಂಬ‌ ಪ್ರಕರಣಕ್ಕೆ ಸಂಬಂಧ ಎಸ್ಪಿ‌ವೇದಮೂರ್ತಿ ಅವರು‌ಸ್ಫಷ್ಟನೆ ನೀಡಿದ್ದಾರೆ.

ನಾಲ್ಕು ತಿಂಗಳ‌ಹಿಂದೆ ಆಂಜಿನಯ್ಯ ಎಂಬುವವರು ತಮ್ಮ ಮನೆಯಲ್ಲಿ‌ದ್ಕದ ರೂ. 55 ಸಾವಿರ ಕಳುವಾಗಿಗಿದ್ದು ಭೀಮಣ್ಣ ಎಂಬುವವರು ಕಳ್ಳತನ ಮಾಡಿದ್ದಾರೆಂದು ಇಡಪನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ‌ಆಧಾರದ ಮೇಲೆ ರಾಯಚೂರು ತಾಲ್ಲೂಕಿನ ಲಿಂಗಖಾನದೊಡ್ಡಿ ಗ್ರಾಮದ ಭೀಮಣ್ಣ ಎಂಬ ಯುವಕನ್ನನ್ನು ಇಡಪನೂರು ಪೊಲೀಸರು ಠಾಣೆಗೆ ಕರೆದೊಯ್ದು ಮನಸೋಯಿಚ್ಛೆ ಥಳಿಸಿದ್ದಾರೆಂದು ಗಾಯಾಳು‌ಭೀಮಣ್ಣ ಹಾಗೂ ಅವರ ಸಂಬಂಧಿಕರು ಆರೋಪಿಸಿದ್ದರು.

Body: ಅಂಜಿನನಯ್ಯ ಅವರ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸಭೆ ನಡೆಸಿ ತಪ್ಪು ಮಾಡಿಲ್ಲ ಎಂದು ಸಾಬೀತು ಮಾಡಿದ್ದರು ಇದಕ್ಕೆ ಆಂಜಿನಯ್ಯ ಸಹ‌ಸುಮ್ಮನಾಗಿದ್ದ ಆದ್ರೆ ಇದಕ್ಕಿಂದಂತೆ ಈಗ ಯಾವುದೋ ಹಳೆ ದ್ವೇಷದಿಂದ ಇಡಪನೂರು ಪೊಲೀಸರಿಗೆ ಭೀಮಣ್ಣನ ವಿರುದ್ಧ ದೂರು ನೀಡಿದ್ದಾನೆ.
ಈ ಹಿನ್ನೆಲೆಯಲ್ಲಿ ಇಡಪನೂರು ಪೊಲೀಸರು ವಿಚಾತಣೆಗೆ ಎಂದು ಭೀಮಣ್ಣನನ್ನು ಠಾಣೆಗೆ ಕರೆದು ಲಾಠಿ ಮುರಿದಂತೆ ಹೊಡೆದು ಬೆನ್ನು,ಕೈ.ಕಾಲುಗಳಿಗೆ ಗಾಯಗೊಳಿಸಿದ್ದಲ್ಲದೇ ತಪ್ಪು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದಾರೆಂದು ಗಾಯಗೊಂಡ ಭೀಮಣ್ಣ ಆರೋಪಿಸಿದ್ದರು.
ಸದ್ಯ ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ.
ಈಗ ಪ್ರಕರಣದ ಕುರಿತು ಎಸ್.ಪಿ.ಸಿ.ಬಿ.ವೆದಮೂರ್ತಿ ಅವರು ಸ್ಪಷ್ಟನೆ ನೀಡಿ,‌ಕಳ್ಳತನ ಮಾಡಿರುವ ಶಂಕೆ ಹಾಗೂ ದೂರಿನ ಮೇರೆಗೆ ಭೀಮಣ್ಣನನಿಗೆ ವಿಚಾರಣೆಗೆ ಠಾಣೆಗೆ ಕರೆದುಕೊಂಡು ಥಳಿಸಿದ್ದಾರೆಂದು ನನ್ನ‌ಗಮನಕ್ಕೆ ಬಂದಿಲ್ಲ, ಅದು‌ ಪೊಲೀಸರು ಥಳಿಸಿಲ್ಲ , ಭೀಮಣ್ಣನಿಗೆ ಥಳಿಸಿದ್ದೇ ಆದಲ್ಲಿ ಅವರು ಪೊಲೀಸರ ವಿರುದ್ದೂಧ ದೂರು ನೀಡಿದ್ದಲ್ಲಿ ತನಿಖೆ ನಡೆಸಿ ತಪ್ಪಿತಸ್ಥ ಸಿಬ್ಬಂದಿಗಳ‌ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.