ETV Bharat / state

'ಎಸ್​ಪಿ-ಐಜಿಪಿ ನೇತೃತ್ವದಲ್ಲಿ ನಡೆಯಲಿದೆ ಶಿವಮೊಗ್ಗದ ಭೀಕರ ಸ್ಫೋಟ ಪ್ರಕರಣದ ತನಿಖೆ' - DG and IG Praveen Sood information on the Shivamogga blasts case

ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಜಿ ಹಾಗು ಐಜಿ ಪ್ರವೀಣ್​ ಸೂದ್ ತಿಳಿಸಿದ್ದಾರೆ.

sp-igp-will-investigate-the-probe-shivamogga-blasts-case
ಡಿಜಿ ಹಾಗು ಐಜಿ ಪ್ರವೀಣ್​ ಸೂದ್
author img

By

Published : Jan 22, 2021, 6:14 PM IST

ರಾಯಚೂರು: ಶಿವಮೊಗ್ಗದಲ್ಲಿ ನಡೆದ ಭೀಕರ ಸ್ಫೋಟ ಪ್ರಕರಣದ ತನಿಖೆ ಎಸ್​ಪಿ ಹಾಗೂ ಐಜಿಪಿ ನೇತೃತ್ವದಲ್ಲಿ ನಡೆಯಲಿದೆ ಎಂದು ಡಿಜಿ ಹಾಗು ಐಜಿ ಪ್ರವೀಣ್​ ಸೂದ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಐಜಿಪಿ, ಎಸ್​ಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಯಲಿದೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ರೈಲು ದರೋಡೆ ಕೇಸ್​​ಗಳಿಗೆ ಕಡಿವಾಣ ಹಾಕಲು ರೈಲ್ವೆ ಪೊಲೀಸ್ ಇಲಾಖೆಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲವಾಗಿದ್ದು, ರೈಲ್ವೆ ಪೊಲೀಸ್ ಬಲವರ್ಧನೆ ಅಗತ್ಯವಿದೆ. ಈ ವಿಚಾರವಾಗಿ ಕೇಂದ್ರ ಗೃಹ ಸಚಿವರ ಗಮನಕ್ಕೆ ತರಲಾಗಿದೆ. ಕೇಂದ್ರ ಸರ್ಕಾರ ರೈಲ್ವೆ ಪೊಲೀಸ್ ಬಲವರ್ಧನೆಗೆ ಕ್ರಮ ಕೈಗೊಳ್ಳಲಿದೆ ಎಂದರು.

ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ 2021-25ನೇ ಸಾಲಿನ ಅವಧಿಗೆ ಪೊಲೀಸ್ ಇಲಾಖೆ ಆಧುನೀಕರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್​ ಶಾ 2,700 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಓದಿ: ಹಣ ಗೋಲ್‌ಮಾಲ್​ ಮಾಡಿದ್ದು ನೀವು, ನಾನಲ್ಲ: ಯೋಗೇಶ್ವರ್​ಗೆ ಹೆಚ್​​ಡಿಕೆ ಟಾಂಗ್

ಈ ಅನುದಾನದಲ್ಲಿ ರಾಜ್ಯಾದ್ಯಂತ 2,000 ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗುವುದು. ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮೀಸಲಾತಿ ವಿಚಾರದಲ್ಲಿ ನಕಲಿ ಮೀಸಲಾತಿ ಪ್ರಮಾಣಪತ್ರ ಪಡೆದಿದ್ದ ಹಲವು ಅಧಿಕಾರಿಗಳು ಈಗಾಗಲೇ ಪ್ರಮಾಣಪತ್ರ ವಾಪಸ್​ ಸಲ್ಲಿಸಿದ್ದಾರೆ. ಸ್ಥಳೀಯ ಮೀಸಲಾತಿ ನಿಯಮವನ್ನು ಇಲಾಖೆ ಕಟ್ಟುನಿಟ್ಟಾಗಿ ಪಾಲಿಸಲಿದೆ. ಮಹಿಳೆಯರ ಅಕ್ರಮ ಕಳ್ಳ ಸಾಗಾಣಿಕೆಗೂ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕ ಮಾನವ ಕಳ್ಳಸಾಗಾಣಿಕೆ ನಿಷೇಧ ಘಟಕ ಸ್ಥಾಪನೆ ಮಾಡಲಾಗುವುದು. ಪ್ರತಿ ಘಟಕಕ್ಕೆ ಪ್ರತ್ಯೇಕ ವಾಹನ ಹಾಗೂ ಸಿಬ್ಬಂದಿ ಒದಗಿಸಲು ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.