ರಾಯಚೂರು: ಇಷ್ಟೊತ್ತಿಗಾಗಲೇ ಮುಂಗಾರು ಪೈರು ಕಾಣ್ಬೇಕಿತ್ತು. ಆದರೆ, ಇನ್ನೂ ಭೂಮಿ ಹದಗೊಳಿಸಲಾಗ್ತಿದೆ. ಎತ್ತುಗಳಲ್ಲಾಗಲಿ, ಈ ರೈತನಿಗಾಗಲಿ ಖುಷಿಯಿಲ್ಲ. ಕಸವೂ ಕಾಣಿಸ್ತಿಲ್ಲ. ಯಾಕಂದ್ರೇ, ಮುಂಗಾರು ಮಳೆ ಕೊರತೆ.
ರಾಯಚೂರು ಜಿಲ್ಲೆಯಲ್ಲಿ ಈ ಬಾರಿಯೂ ಮುಂಗಾರು ಕೈಕೊಟ್ಟಿದೆ. ಈಗಾಗಲೇ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗ್ಬೇಕಿತ್ತು. ಆದರೆ, ಇಲ್ಲೊಂದಿಷ್ಟು, ಅಲ್ಲೊಂದಿಷ್ಟು ಕಡೆ ಬಿತ್ತನೆಯಾಗಿದೆ. ವಾರ್ಷಿಕ ವಾಡಿಕೆ ಮಳೆ 632 ಮಿ.ಮೀ. ಜನವರಿ 1ರಿಂದ ಜುಲೈ 2ರವರೆಗೆ ವಾಡಿಕೆಯಂತೆ 154 ಮಿ.ಮೀ. ಮಳೆಯಾಗಬೇಕು. ಆದರೆ, ಆಗಿದ್ದು ಬರೀ 80 ಮಿ.ಮೀ. ಅಂದ್ರೇ ಶೇ.48ರಷ್ಟು ಮಳೆ ಕೊರತೆ ಕಾಣಿಸಿದೆ. ಮುಂಗಾರಿನಲ್ಲಿ 3,50,500 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿತ್ತು. ಆದರೆ, ಈಗ ಕೇವಲ 6,133 ಹೆಕ್ಟೇರ್ನಲ್ಲಿ ಬಿತ್ತಲಾಗಿದೆ.