ETV Bharat / state

ರಾಜ್ಯದ ಅನೇಕ ಕಡೆಗಳಲಿಲ್ಲ ಸೂಕ್ತ ಒಳಚರಂಡಿ ವ್ಯವಸ್ಥೆ - ನೈರ್ಮಲ್ಯಕ್ಕೆ ಅಡ್ಡಿ

ನಗರಗಳು, ಜನಸಂಖ್ಯೆ ಬೆಳೆದಂತೆ ತ್ಯಾಜ್ಯ, ಕೊಳಚೆ ನೀರು ಹೆಚ್ಚು ಉತ್ಪಾದನೆಯಾಗುತ್ತಿದೆ. ಅದರಲ್ಲೂ ಒಳಚರಂಡಿ ಸಮಸ್ಯೆ ಕೆಲವು ಪ್ರದೇಶಗಳನ್ನು ಬೆನ್ನು ಬಿಡದೆ ಕಾಡುತ್ತಿದೆ. ಇದರಿಂದ ಜನತೆ ಮಾಲಿನ್ಯದ ನಡುವೆಯೇ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

some cities need proper UGD system
ರಾಜ್ಯದ ಅನೇಕ ಕಡೆಗಳಲಿಲ್ಲ ಸೂಕ್ತ ಒಳಚರಂಡಿ ವ್ಯವಸ್ಥೆ - ನೈರ್ಮಲ್ಯಕ್ಕೆ ಅಡ್ಡಿ!
author img

By

Published : May 2, 2021, 2:40 PM IST

ಬೆಳಗಾವಿ/ವಿಜಯಪುರ/ರಾಯಚೂರು: ನಗರಗಳು, ಜನಸಂಖ್ಯೆ ಬೆಳೆದಂತೆ ತ್ಯಾಜ್ಯ, ಕೊಳಚೆ ನೀರು ಹೆಚ್ಚು ಉತ್ಪಾದನೆಯಾಗುತ್ತಿದೆ. ಅದರಲ್ಲೂ ಒಳಚರಂಡಿ ಸಮಸ್ಯೆ ಕೆಲವು ಪ್ರದೇಶಗಳನ್ನು ಬೆನ್ನು ಬಿಡದೆ ಕಾಡುತ್ತಿದೆ. ಇದರಿಂದ ಜನತೆ ಮಾಲಿನ್ಯದ ನಡುವೆಯೇ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ ಅನೇಕ ಕಡೆಗಳಲಿಲ್ಲ ಸೂಕ್ತ ಒಳಚರಂಡಿ ವ್ಯವಸ್ಥೆ - ನೈರ್ಮಲ್ಯಕ್ಕೆ ಅಡ್ಡಿ

ಕೇಂದ್ರ ಸರ್ಕಾರದ ಸ್ಮಾರ್ಟ್​ ಸಿಟಿ, ಅಮೃತ್‍ ಸಿಟಿಯಂತಹ ಮಹತ್ವಾಕಾಂಕ್ಷೆ ಯೋಜನೆಗಳ ವ್ಯಾಪ್ತಿಗೆ ಬೆಳಗಾವಿ ಆಯ್ಕೆಯಾಗಿದ್ದರೂ ಶೇ. 50ರಷ್ಟು ಭಾಗದಲ್ಲಿ ಒಳಚರಂಡಿಯೇ ಇಲ್ಲದಿರುವುದು ವಿಪರ್ಯಾಸ. ರಸ್ತೆ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿರೋದ್ರಿಂದ ಒಳಚರಂಡಿ ಕಾಮಗಾರಿಗೆ ಹಿನ್ನೆಡೆಯಾಗಿದೆಯೆಂಬ ಆರೋಪಗಳಿವೆ. ಆದ್ರೆ ಈ ಮಾತನ್ನು ಪಾಲಿಕೆ ಆಯುಕ್ತರು ತಳ್ಳಿ ಹಾಕಿದ್ದು, ಉಳಿದ ಶೇ. 50ರಷ್ಟು ಭಾಗದಲ್ಲಿ ಒಳಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಸೂಕ್ತ ಒಳಚರಂಡಿ ವ್ಯವಸ್ಥೆಯಿಂದ ವಿಜಯಪುರ ಜನತೆ ವಂಚಿತರಾಗಿದ್ದಾರೆ. ಸದ್ಯ ಒಳಚರಂಡಿ ಕಾಮಗಾರಿಗೆ ಹಲವು ಅಡೆತಡೆಗಳ ಜತೆಗೆ ಆರ್ಥಿಕ ಪರಿಸ್ಥಿತಿ ಕೂಡ ಸರಿಯಿಲ್ಲ ಅಂತಾರೆ ವಿಜಯಪುರ ಪಾಲಿಕೆ ಆಯುಕ್ತರು.

ರಾಯಚೂರು ಜನಗಣತಿಯ ಅಂಕಿ - ಅಂಶಕ್ಕೆ ಅನುಗುಣವಾಗಿ 2016ರ ನವೆಂಬರ್‌ ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. 2019ರೊಳಗೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಇನ್ನೂ ಕುಂಟುತ್ತಾ ಸಾಗಿದೆ. ಉತ್ತಮ ಒಳಚರಂಡಿ ವ್ಯವಸ್ಥೆ ಒದಗಿಸುವ, ಇನ್ನೂ ಹೆಚ್ಚಿನ ಕಾಮಗಾರಿ ಕೈಗೊಳ್ಳುವ ಉದ್ದೇಶವನ್ನು ಪಾಲಿಕೆ ಹೊಂದಿದ್ದರೂ ಸದ್ಯದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಯೋಜನೆಗಳ ಕಾಮಗಾರಿಗಳನ್ನು ನಿಗದಿಯಂತೆ ಆಯಾ ಕಾಲಘಟ್ಟದಲ್ಲಿ ಪೂರ್ಣಗೊಳಿಸಬೇಕು. ಆದ್ರೆ ಸೂಕ್ತ ಒಳಚರಂಡಿ ವ್ಯವಸ್ಥೆಯಿಂದ ಜನರು ವಂಚಿತರಾಗಿರೋದು ಮಾತ್ರ ವಿಪರ್ಯಾಸ. ಹಾಗಾಗಿ ಸ್ಥಗಿತಗೊಂಡಿರುವ ಒಳಚರಂಡಿ ಕಾಮಗಾರಿಗಳನ್ನು ಚುರುಕುಗೊಳಿಸುವತ್ತ ಅಧಿಕಾರಿಗಳು ಗಮನ ಹರಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.