ರಾಯಚೂರು : ಗಾಯಕಿ ಮಂಗ್ಲಿ (ಸತ್ಯವತಿ ರಾಠೋಡ್) ಇಂದು ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಪರ ಪ್ರಚಾರ ನಡೆಸಿದರು. ಮಸ್ಕಿ ತಾಲೂಕಿನ ಅಡವಿಬಾವಿ ತಾಂಡಾದಲ್ಲಿ ತೆರೆದ ವಾಹನದ ಮೇಲೆ ರಾಬರ್ಟ್ ಚಿತ್ರದ ತೆಲುಗು ಹಾಡು 'ಕಣ್ಣೇ ಅದಿರಿಂದೀ ಹಾಗೂ ಕನ್ನಡ ಭಾಷೆಯ 'ಕಣ್ಣು ಹೊಡೆಯೋಕೆ' ಹಾಡುಗಳನ್ನು ಹಾಡಿದರು.
ಜೊತೆಗೆ ಲಂಬಾಣಿ ಭಾಷೆಯಲ್ಲಿಯೂ ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಓದಿ : ಕಾಂಗ್ರೆಸ್ನವರು ಯಾವುದೇ ವ್ಯೂಹ ರಚಿಸಿದರೂ ನಮ್ಮ ಸರ್ಕಾರ ಸುರಕ್ಷಿತ : ಅರವಿಂದ್ ಲಿಂಬಾವಳಿ
ಇದಾದ ಬಳಿಕ ಮಾತನಾಡಿದ ಮಂಗ್ಲಿ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ನಾನು ತುಂಬಾ ಕಷ್ಟಪಟ್ಟು ಈ ಸ್ಥಾನಕ್ಕೆ ಬಂದಿದ್ದೇನೆ. ನೀವು ತೋರಿಸುವ ಅಭಿಮಾನಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದರು. ಪ್ರತಾಪ್ ಗೌಡ ಪಾಟೀಲ್ ಪರ ಪ್ರಚಾರಕ್ಕೆ ಆಗಮಿಸಿದ್ದೇನೆ.
ದಯವಿಟ್ಟು ಎಲ್ಲರೂ ಪ್ರತಾಪ್ ಗೌಡ ಪಾಟೀಲ್ಗೆ ಮತ ಹಾಕಿ, 25 ಸಾವಿರ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಿ ಎಂದ ಮನವಿ ಮಾಡಿದರು. ಮಂಗ್ಲಿಯನ್ನು ನೋಡಲು ದೊಡ್ಡ ಜನಸ್ತೋಮವೇ ಸೇರಿತ್ತು.