ರಾಯಚೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ನಗರದ ಮಹಾವೀರ ಸರ್ಕಲ್ನಲ್ಲಿ ಜೈನ ಸಮುದಾಯದ ಜನ ಸೇರಿ ಸಾಮಾಜಿಕ ಅಂತರದೊಂದಿಗೆ ಪ್ರಾಂಗಣದಲ್ಲಿ ಭಜನೆ, ಕೀರ್ತನೆ ಮಾಡಿ, ಮಂಗಳಾರತಿ ಮಾಡುವ ಮೂಲಕ ಸರಳವಾಗಿ ಜಯಂತಿ ಆಚರಿಸಿದ್ರು.
ಪ್ರತಿ ವರ್ಷ ಸಂಭ್ರಮ, ವಿಜೃಂಭಣೆಯಿಂದ ಮಾಡಲಾಗುತ್ತಿದ್ದ ಮಹಾವೀರ ಜಯಂತಿಯನ್ನು ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಮಾಡಲಾಯಿತು.