ETV Bharat / state

ಬಿಜೆಪಿಯವರ ವಾರಂಟಿಯೇ ಮುಗಿದಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ - ಈಟಿವಿ ಭಾರತ ಕನ್ನಡ

ರಾಯಚೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

siddaramaiah-slams-bjp-govt
ವಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Apr 27, 2023, 5:30 PM IST

ವಿಪಕ್ಷ ನಾಯಕ ಸಿದ್ದರಾಮಯ್ಯ

ರಾಯಚೂರು : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​​ ಘೋಷಿಸಿರುವ ಗ್ಯಾರಂಟಿ ಕಾರ್ಡ್​ ಎಕ್ಸ್​ಪೈರಿ ಆಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಬಿಜೆಪಿಯವರ ವಾರಂಟಿಯೇ ಮುಗಿದಿದೆ ಎಂದು ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಮಾನವಿ ಪಟ್ಟಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಜಿ.ಹಂಪಯ್ಯ ನಾಯಕ ಪರವಾಗಿ ಪ್ರಚಾರಕ್ಕೆ ಆಗಮಿಸಿದ ವೇಳೆ ಹೆಲಿಪ್ಯಾಡ್​​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕಳೆದ ಬಾರಿ ಚುನಾವಣೆಯಲ್ಲಿ 600 ಭರವಸೆಗಳನ್ನು ನೀಡಿದ್ದರು. ಇದರಲ್ಲಿ ಇವರು ಎಷ್ಟು ಈಡೇರಿಸಿದ್ದಾರೆ?. ಕೇವಲ 50 ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ. ಶೇ.10ರಷ್ಟು ಆಶ್ವಾಸನೆಗಳನ್ನು ಬಿಜೆಪಿಯವರು ಈಡೇರಿಸಿಲ್ಲ. ಬಿಜೆಪಿಯವರ ವಾರಂಟಿಯೇ ಮುಗಿದಿದೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ನಾನು ಮುಖ್ಯಮಂತ್ರಿಯಾಗಿರುವಾಗ ಯಾರಾದರೂ 40 ಪರ್ಸೆಂಟ್ ಸರ್ಕಾರ ಎಂದು ಹೇಳಿದ್ರಾ?. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಮತ್ತು ಬಿಜೆಪಿ ಸರ್ಕಾರಕ್ಕೆ ಅಲ್ವಾ 40 ಪರ್ಸೆಂಟ್​ ಸರ್ಕಾರ ಅಂತಾ ಹೇಳುತ್ತಿರುವುದು ಎಂದು ಟೀಕಿಸಿದರು.

ಇದನ್ನು ಓದಿ: ಡಿಕೆ ಶಿವಕುಮಾರ ರಕ್ತ ಯಾರ ಉಪಯೋಗಕ್ಕೂ ಬರಲ್ಲ: ಸಿಎಂ ಬೊಮ್ಮಾಯಿ ಟಾಂಗ್

ಪ್ರಧಾನಿ ಮೋದಿಯವರು ಹೊರದೇಶಗಳಿಂದ ಕಪ್ಪು ಹಣ ತರುವುದಾಗಿ ಹೇಳಿದ್ದರು. ಕಪ್ಪು ಹಣ ತಂದ್ರಾ. ಎರಡು ಕೋಟಿ ಉದ್ಯೋಗ ಕೊಟ್ರಾ, ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಬರಗಾಲ, ಪ್ರವಾಹ ಬಂದಾಗ ಮೋದಿ ಬರಲಿಲ್ಲ. ಇವಾಗ ಬಂದು ಬರಿ ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳುವವರು ನರೇಂದ್ರ ಮೋದಿಯವರು. ನಾವಲ್ಲ ಎಂದು ಟೀಕಿಸಿದರು. ವರುಣಾ ಕ್ಷೇತ್ರದಲ್ಲಿ ಸಿದ್ದು ಸೊಸೆ ಚುನಾವಣೆ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾಕೆ ಪ್ರಚಾರ ಮಾಡಬಾರದು. ನಮ್ಮ ಪರವಾಗಿ ಪ್ರಚಾರ ಮಾಡಿದ್ರೆ ಏನ್ ತಪ್ಪು ಎಂದು ಮರು ಪ್ರಶ್ನೆ ಹಾಕಿದರು.

ಇದನ್ನು ಓದಿ: ರಾಹುಲ್ ಗಾಂಧಿ 224 ಕ್ಷೇತ್ರಕ್ಕೂ ಹೋಗಲಿ, ಅವರು ಹೋದಲೆಲ್ಲ ಕಾಂಗ್ರೆಸ್ ಸೋತಿದೆ: ನಳಿನ್ ಕುಮಾರ್ ಕಟೀಲ್

ಲಿಂಗಾಯತರಿಗೆ ಅಪಮಾನ ಮಾಡಿದ್ದೀರಿ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಕಣ್ಣೀರು ಹಾಕಿಸಿದ್ರು. ಜಗದೀಶ್ ಶೆಟ್ಟರಿಗೆ ಟಿಕೆಟ್ ಕೊಡದೇ ತೆಗೆದು ಹಾಕಿದರು. ಲಕ್ಷ್ಮಣ್ ಸವದಿಗೂ ಟಿಕೆಟ್ ಕೊಡ್ಲಿಲ್ಲ. ಹಾಗಾದ್ರೆ ಲಿಂಗಾಯತರಿಗೆ ಅವಮಾನ ಮಾಡಿದವರು ಯಾರು ಎಂದು ಪ್ರಶ್ನಿಸಿದರು. ಬಿಜೆಪಿಯವರಿಗೆ ನಡುಕ ಶುರುವಾಗಿದೆ. ಕಾಂಗ್ರೆಸ್ ಗೆಲ್ಲುತ್ತದೆ ಎಂದು ಅವರಿಗೆ ಗೊತ್ತಾಗಿದೆ. ಇಡೀ ರಾಜ್ಯದ ಜನರಿಗೂ ಸತ್ಯ ಗೊತ್ತಾಗಿದೆ ಎಂದು ಹೇಳಿದರು. ಈ ವೇಳೆ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ : ಗರಿಷ್ಠ ದಾಖಲೆಯ ಸೀಟುಗಳಿಂದ ಬಿಜೆಪಿ ಗೆಲ್ಲಿಸಿ: ರಾಜ್ಯದ ಜನತೆಗೆ ಮೋದಿ ಮನವಿ

ಇದನ್ನು ಓದಿ: ನಾನು ಕೂಡ ವೋಟ್​ ಮಾಡುವೆ, ನೀವು ಕೂಡ ತಪ್ಪದೇ ವೋಟ್​ ಮಾಡಿ: ಸೆಲೆಬ್ರಿಟಿಗಳ ಮನವಿ

ಇದನ್ನು ಓದಿ:ಜೆಡಿಎಸ್, ಬಿಜೆಪಿ ಗುಡ್​ ಬೈ ಹೇಳಿ ಕಾಂಗ್ರೆಸ್ ಸೇರಿದ ಚಿಕ್ಕಬಳ್ಳಾಪುರ ನಾಯಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.