ರಾಯಚೂರು: ರಾಯಚೂರು ಜಿಲ್ಲೆಯ ಮಸ್ಕಿ(maski) ಪಟ್ಟಣದ ನಿವಾಸಿ ಶಾಂತಯ್ಯ ಸ್ವಾಮಿ( shantayya swamy) ಒಂದು ಚಿಕ್ಕ ಪಾನ್‌ಶಾಪ್ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಈಗಿನ ದುಬಾರಿ ದುನಿಯಾದಲ್ಲಿ ಸಣ್ಣ ಅಂಗಡಿಯಿಂದ ಬರುವ ಆದಾಯದಲ್ಲಿ ಉತ್ತಮ ಜೀವನ ನಡೆಸುವುದು ಕಷ್ಟ.
ಆದ್ರೆ ತನ್ನ ಜೀವನ ನಿರ್ವಹಣೆ ಜೊತೆಗೇನೆ ಕಳೆದ ನಾಲ್ಕೈದು ವರ್ಷಗಳಿಂದ ಕೋತಿಗಳಿಗೆ ನಿತ್ಯ ಆಹಾರ(food for monkey) ನೀಡುತ್ತಿದ್ದಾರೆ ಶಾಂತಯ್ಯಸ್ವಾಮಿ.
ಕೋತಿಗಳ ಮೇಲೆ ವಿಶೇಷ ಪ್ರೀತಿ ಹೊಂದಿರುವ ಶಾಂತಯ್ಯ ಸ್ವಾಮಿ ನಿತ್ಯ ಕೋತಿಗಳಿಗೆ ಆಹಾರ ನೀಡ್ತಾರೆ. ಇವರ ಅಂಗಡಿ ಮುಂದೆ ಪ್ರತಿದಿನ ಹತ್ತಾರು ಮಂಗಗಳು ಆಹಾರ ಅರಸಿ ಸಮಯಕ್ಕೆ ಸರಿಯಾಗಿ ಬರುತ್ತವೆ. ತಿಂಡಿ - ತಿನಿಸುಗಳು, ಫಲಹಾರಗಳನ್ನು ನೀಡುತ್ತಾರೆ.
ಕೋತಿಗಳು ಸಹ ಇವರೊಂದಿಗೆ ಉತ್ತಮ ಸ್ನೇಹಜೀವಿಗಳಂತಿವೆ. ಶಾಂತಯ್ಯ ಸ್ವಾಮಿ ಬಿಟ್ಟು ಬೇರೆಯವರು ಹತ್ತಿರ ಹೋದರೆ ಮಂಗಗಳು ಕಚ್ಚಲು ಬರುತ್ತವೆ. ಇವರ ಈ ಒಡನಾಟ ನೋಡಲು ಬಹಳ ಖುಷಿ ಆಗುತ್ತದೆ ಅಂತಾರೆ ಸ್ಥಳೀಯ ನಿವಾಸಿ ಜ್ಞಾನೇಶ್ವರ.
ಇದನ್ನೂ ಓದಿ: ದಾವಣಗೆರೆ: ಮದುವೆ ಮನೆ ಊಟ ಸವಿದ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಶಾಂತಯ್ಯ ಸ್ವಾಮಿ ಮಂಗಗಳಿಗೆ ಪ್ರೀತಿ ತೋರಿಸುವ ಜೊತೆಯಲ್ಲಿ ಹಾವುಗಳ ರಕ್ಷಣೆ ಮಾಡುತ್ತಾರೆ. ಮಸ್ಕಿ ಪಟ್ಟಣ ಹಾಗೂ ಸುತ್ತಮುತ್ತ ಹಾವು ಬಂದರೆ ಹೋಗಿ ರಕ್ಷಣಾ ಕಾರ್ಯ ಮಾಡ್ತಾರೆ. ಹಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ತೆಗೆದುಕೊಂಡು ಹೋಗಿ ಬಿಡುತ್ತಾರೆ.