ETV Bharat / state

ಜೆಎನ್​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಎಸ್ಎಫ್ಐ ಪ್ರತಿಭಟನೆ - ಜೆಎನ್​ಯು ವಿಶ್ವವಿದ್ಯಾನಿಲಯ

ಜೆಎನ್​ಯು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಹಾಗೂ ಪ್ರಾಧ್ಯಾಪಕರ ಮೇಲೆ ನಡೆದ ಹಲ್ಲೆ ಖಂಡಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಎಸ್ಎಫ್ಐ ಪ್ರತಿಭಟನೆ ನಡೆಸಿದೆ.

SFI Protest
ಪ್ರತಿಭಟನೆ
author img

By

Published : Jan 6, 2020, 5:40 PM IST

ರಾಯಚೂರು: ಜೆಎನ್​ಯು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಹಾಗೂ ಪ್ರಾಧ್ಯಾಪಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಇಂದು ಎಸ್ಎಫ್ಐ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಎಸ್ಎಫ್ಐ ಪ್ರತಿಭಟನೆ

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಎಸ್ಎಫ್ಐ ಪ್ರತಿಭಟನೆ ನಡೆಸಿ, ಫ್ಯಾಸಿಸ್ಟ್ ಹಿನ್ನೆಲೆಯ ABVP ಸಂಘಟನೆಗೆ ಸೇರಿದ ಗುಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ನಿನ್ನೆ ಸಂಜೆಯ ಸುಮಾರಿಗೆ ಗೂಂಡಾಗಳು ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಕ್ಯಾಂಪಸ್ ಸೇರಿದಂತೆ ವಿದ್ಯಾರ್ಥಿಗಳಿರುವ ಹಾಸ್ಟೆಲ್ ಮತ್ತು ಕೊಠಿಡಿಯೊಳಗೆ ನುಗ್ಗಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದು ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕ ಸಮುದಾಯದ ಮೇಲೆ ಮಾಡಿದ ದೊಡ್ಡ ದಾಳಿಯಾಗಿದೆ.
ಇದನ್ನು ಭಾರತ ವಿದ್ಯಾರ್ಥಿ ಫೆಡರೇಷನ್‌ (SFI) ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (AIDSO) ಮತ್ತು ಕರ್ನಾಟಕ ವಿದ್ಯಾರ್ಥಿ ಸಂಘಟನೆ (KVS) ಸಂಘಟನೆಗಳು ಜಂಟಿಯಾಗಿ ತೀವ್ರವಾಗಿ ಖಂಡಿಸಿದೆ.

ಪ್ರತಿಭಟನೆಯಲ್ಲಿ SFI ಜಿಲ್ಲಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ ಮಾತನಾಡಿ, ಭಾರಿ ಸಂಖ್ಯೆಯ ಎಬಿವಿಪಿ ಸಂಘಟನೆಗೆ ಸೇರಿದ ಗುಂಡಾಗಳು ಮತ್ತು ಹೊರಗಿನಿಂದ ಬಂದ ಕಿಡಿಗೇಡಿಗಳು ವಿದ್ಯಾರ್ಥಿ ಮುಖಂಡರನ್ನು ಮತ್ತು ಜನಪರವಾಗಿ ಆಲೋಚಿಸುವ ಪ್ರಾಧ್ಯಾಪಕರನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ಇವರ ಮೇಲೆ ದಾಳಿಯನ್ನು ಮಾಡಿದ್ದಾರೆ. ಈ ದಾಳಿಯನ್ನು ತಡೆಯುವಲ್ಲಿ ವಿ.ವಿಯ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿಯು ಸಂಪೂರ್ಣವಾಗಿ ವಿಫಲವಾಗಿದೆ. ಭಾರಿ ಭದ್ರತೆಯ ಮಧ್ಯೆಯೂ ಈ ದಾಳಿ ಆಗಿದೆ ಅಂದರೆ ಇದಕ್ಕೆ ವಿ.ವಿ ಆಡಳಿತ ಮಂಡಳಿಯ ಮತ್ತು ಭದ್ರತಾ ಸಿಬ್ಬಂದಿಗಳು ಸೇರಿದಂತೆ ಸ್ಥಳದಲ್ಲಿ ಇದ್ದ ಮೌನ ದಾರಿ ಪೋಲೀಸರ ಪರೋಕ್ಷ ಬೆಂಬಲ ಮತ್ತು ಸಹಕಾರ ಇರುವ ಅಂಶ ನಮಗೆ ಎದ್ದು ಕಾಣುತ್ತದೆ ಎಂದು ದೂರಿದ್ದಾರೆ.

ಇಂತಹ ಗುಂಡಾಗಿರಿ ಮಾಡುವ ABVP ಸಂಘಟನೆಯನ್ನು ನಿಷೇಧ ಮಾಡುವುದರ ಜೊತೆಗೆ ದೇಶದ ಜ್ವಲಂತ ವಿದ್ಯಾರ್ಥಿ ಸಮಸ್ಯೆ ಗಳ ಪರಿಹಾರಕ್ಕೆ ಮುಂದಾಗಬೇಕು ಇಲ್ಲವಾದಲ್ಲಿ ಇಡೀ ದೇಶವ್ಯಾಪಿ ವಿದ್ಯಾರ್ಥಿಗಳು ಬೀದಿಗಿಳಿದು ವಿದ್ಯಾರ್ಥಿ ವಿರೋಧಿ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Intro:JNU ವಿಶ್ವವಿದ್ಯಾಲಯ ವಿದ್ಯಾರ್ಥಿ ಮುಖಂಡರ ಮತ್ತು ಪ್ರಾಧ್ಯಾಪಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಪ್ರತಿಭಟನೆ.
ರಾಯಚೂರು.ಜ.6

ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯವಾದ (JNU) ನಲ್ಲಿ ವಿದ್ಯಾತ್ಥಿಗಳ ಹಾಗೂ ಪ್ರಾಧ್ಯಪಕರ ಮೇಲೆ ದಾಳಿ,ಹಲ್ಲೆ ನಡೆಸಿದ್ದನ್ನು ಖಂಡಿಸಿ ಇಂದು ಎಸ್ಎಫ್ಐ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

Body:ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ
ಫ್ಯಾಸಿಸ್ಟ್ ಹಿನ್ನೆಲೆಯ ABVP ಸಂಘಟನೆಗೆ ಸೇರಿದ ಗುಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ನಿನ್ನೆ ಸಂಜೆಯ ಸುಮಾರಿಗೆ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಕ್ಯಾಂಪಸ್ ಸೇರಿದಂತೆ ವಿದ್ಯಾರ್ಥಿಗಳಿರುವ ಹಾಸ್ಟೆಲ್ ಮತ್ತು ಕೊಠಿಡಿಯೊಳಗೆ ನುಗ್ಗಿ ಮಾರಕಾಸ್ತ್ರಗಳನ್ಬು ಕಬ್ಬಿಣದ ರಾಡ್, ಸಲಾಕೆ ಮತ್ತು ಇತರ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಇದು ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕ ಸಮುದಾಯದ ಮೇಲೆ ಮಾಡಿದ ದೊಡ್ಡ ದಾಳಿಯಾಗಿದೆ ಎಂದು ಖಂಡಿಸಿದರು.
ಇದನ್ನು ಭಾರತ ವಿದ್ಯಾರ್ಥಿ ಫೆಡರೇಷನ್‌ (SFI) ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (AIDSO) ಮತ್ತು ಕರ್ನಾಟಕ ವಿದ್ಯಾರ್ಥಿ ಸಂಘಟನೆ (KVS) ಸಂಘಟನೆಗಳು ಜಂಟಿಯಾಗಿ ತೀವ್ರವಾಗಿ ಖಂಡಿಸುತ್ತವೆ.
ಪ್ರತಿಭಟನೆಯಲ್ಲಿ SFI ಜಿಲ್ಲಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ ಮಾತನಾಡಿ, ಭಾರಿ ಸಂಖ್ಯೆಯ ಎಬಿವಿಪಿ ಸಂಘಟನೆಗೆ ಸೇರಿದ ಗುಂಡಾಗಳು ಮತ್ತು ಹೊರಗಿನಿಂದ ಬಂದ ಕಿಡಿಗೇಡಿಗಳು ವಿದ್ಯಾರ್ಥಿ ಮುಖಂಡರನ್ನು ಮತ್ತು ಜನಪರವಾಗಿ ಆಲೋಚಿಸುವ ಪ್ರಾಧ್ಯಾಪಕರನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ಇವರ ಮೇಲೆ ದಾಳಿಯನ್ನು ಮಾಡಿದ್ದಾರೆ. ಈ ದಾಳಿಯನ್ನು ತಡೆಯುವಲ್ಲಿ ವಿ.ವಿ ಯ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿಯು ಸಂಪೂರ್ಣವಾಗಿ ವಿಫಲವಾಗಿದೆ. ಭಾರಿ ಭದ್ರತೆಯ ಮಧ್ಯೆ ಯೂ ಈ ದಾಳಿ ಆಗಿದೆ ಅಂದರೆ ಇದಕ್ಕೆ ವಿ.ವಿ ಆಡಳಿತ ಮಂಡಳಿಯ ಮತ್ತು ಭದ್ರತಾ ಸಿಬ್ಬಂದಿಗಳು ಸೇರಿದಂತೆ ಸ್ಥಳದಲ್ಲಿ ಇದ್ದ ಮೌನ ದಾರಿ ಪೋಲೀಸರ ಪರೋಕ್ಷ ಬೆಂಬಲ ಮತ್ತು ಸಹಕಾರ ಇರುವ ಅಂಶ ನಮಗೆ ಎದ್ದು ಕಾಣುತ್ತದೆ ಎಂದು ದೂರಿದರು.
ಕಳೆದ ಎರಡು ತಿಂಗಳಿನಿಂದ ವಿ.ವಿ ಹಾಸ್ಟೆಲ್ ಶುಲ್ಕ ಹೆಚ್ಚಳ ಹಾಗೂ ವಿ.ವಿ ಸುಧಾರಣೆ ಗಾಗಿ ವಿದ್ಯಾರ್ಥಿ ಗಳು ಮಾಡುತ್ತಿರುವ ಹೋರಾಟವನ್ನು ಗುರಿಯಾಗಿಸಿಕೊಂಡು ಹಾಗೂ ಅದನ್ನು ಹತ್ತಿಕ್ಕಲು ಮತ್ತು ವಿದ್ಯಾರ್ಥಿಗಳ ಜನಪರ ವಾದ ಧ್ವನಿಯ ಹೋರಾಟಗಳನ್ನು ದಾರಿ ತಪ್ಪಿಸಲು ಭಾಜಪದ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಾಡಿಸಿರುವ ವ್ಯವಸ್ಥಿತ ಸಂಚಾಗಿದೆ. ಕೂಡಲೇ ದಾಳಿ ಮಾಡಿದ ಗುಂಡಾಗಳನ್ನು ಮತ್ತು ಅದರ ಹಿಂದಿರುವ ಎಲ್ಲಾ ಶಕ್ತಿ ಗಳನ್ನು ಬಂಧಿಸಿ ಸೂಕ್ತ ಕಾನೂನು ಶಿಕ್ಷೆಗೆ ಒಳಪಡಿಸಬೇಕು ಮತ್ತು ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿ ಮುಖಂಡರಿಗೆ ಹಾಗೂ ಪ್ರಾಧ್ಯಾಪಕರಿಗೆ ಸೂಕ್ತ ಭದ್ರತೆಯನ್ನು ನೀಡ ಬೇಕೆಂದು ಅಗ್ರಹಿಸಿದರು.
ಇಂತಹ ಗುಂಡಾಗಿರಿ ಮಾಡುವ ABVP ಸಂಘಟನೆ ಯನ್ನು ನಿಷೇಧ ಮಾಡುವುದರ ಜೊತೆಗೆ ದೇಶದ ಜ್ವಲಂತ ವಿದ್ಯಾರ್ಥಿ ಸಮಸ್ಯೆ ಗಳ ಪರಿಹಾರಕ್ಕೆ ಮುಂದಾಗಬೇಕು ಇಲ್ಲವಾದಲ್ಲಿ ಇಡೀ ದೇಶವ್ಯಾಪಿ ವಿದ್ಯಾರ್ಥಿಗಳು ಬೀದಿಗಿಳಿದು ವಿದ್ಯಾರ್ಥಿ ವಿರೋಧಿ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ AIDSO ಜಿಲ್ಲಾಧ್ಯಕ್ಷ ಮಹೇಶ ಚೀಕಲಪರ್ವಿ, KVSನ ಲಕ್ಷ್ಮಣ್ ಮಂಡಲಗೇರಾ, AIDYO ನ ಜಿಲ್ಲಾಧ್ಯಕ್ಷರಾದ ಚನ್ನಬಸವ ಜಾನೆಕಲ್, ಕರ್ನಾಟಕ ಜನಶಕ್ತಿಯ ಕುಮಾರ ಸಮತಳ ವಿದ್ಯಾರ್ಥಿ ಮುಖಂಡರಾದ ದೀಲ್ ಶಾದ್, ಉಮೇಶ ನಾಯಕ, ಪೀರ್ ಸಾಬ್, ಶಶಿ ಕಲಾ, ಸೇರಿದಂತೆ ಅನೇಕರಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.