ರಾಯಚೂರು: ಮಾನವಿ ತಹಶೀಲ್ದಾರ್ ಅಮರೇಶ್ ಬಿರಾದಾರ್ ಅವರು ಶಿರಸ್ತೇದಾರರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಮಾನವಿ ತಹಶೀಲ್ದಾರ್ ಅಮರೇಶ್ ಬಿರಾದಾರ್ ಕಚೇರಿಯ ಶಿರಸ್ತೇದಾರಿರಗೆ ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಿಡಿಯೊಂದಿಗೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ದೂರನ್ನು ಆಧರಿಸಿ ಸಮಿತಿಯ ವಿಚಾರಣೆ ನಡೆಸುವ ಮೂಲಕ ವರದಿಯನ್ನ ಸಲ್ಲಿಸುವಂತೆ ಲೈಂಗಿಕ ಕಿರುಕುಳ ದೂರು ನಿವಾರಣಾ ಸಮಿತಿ ಅಧ್ಯಕ್ಷೆ ಆರ್.ಇಂದಿರಾ ಅವರಿಗೆ ಸೂಚಿಸಲಾಗಿದೆ.
![ತನಿಖೆಗೆ ಡಿಸಿ ಆರ್.ವೆಂಕಟೇಶ್ ಕುಮಾರ್ ಆದೇಶ](https://etvbharatimages.akamaized.net/etvbharat/prod-images/kn-rcr-02-aaroopa-photo-7202440_24092020110015_2409f_1600925415_1084.jpg)
ಕಾರ್ಯಸ್ಥಳದಲ್ಲಿನ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆ, ನಿಷೇಧ, ಪರಿಹಾರ) ಕಾಯ್ದೆ 2015ರ ಅನ್ವಯ ಸಮಿತಿ ಮೂಲಕ ವಿಚಾರಣೆ ನಡೆಸಿ, ಶೀಘ್ರ ವರದಿಯನ್ನ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.