ETV Bharat / state

ಬನ್ನಿ ಮಕ್ಕಳೇ, ಧೈರ್ಯವಾಗಿ ಬನ್ನಿ.. ಕೋವಿಡ್‌ ನಿಯಮಗಳ ಪಾಲನೆ ಜತೆಗೆ ಶಾಲೆಗಳ ಪ್ರಾರಂಭೋತ್ಸವ..

author img

By

Published : Jan 1, 2021, 3:49 PM IST

ಮೊದಲ ದಿನವಾದ ಇಂದು ಬೆರಳೆಣಿಕೆಯಷ್ಟು ಮಕ್ಕಳು ಶಾಲೆಗಳಿಗೆ ಆಗಮಿಸಿದ್ದರು. ಶಾಲೆಗೆ ಬರುವ ಮಕ್ಕಳ ಕೈಗೆ ಶಿಕ್ಷಕರು ಸ್ಯಾನಿಟೈಸರ್ ಹಾಕಿ, ಥರ್ಮಲ್ ಸ್ಕ್ರೀನಿಂಗ್​​ ಮಾಡಿ ಹೂ ನೀಡಿ ಸ್ವಾಗತಿಸಿದ್ರು..

schools open in lingasuguru
ಶಾಲೆಗಳ ಪ್ರಾರಂಭೋತ್ಸವ

ಲಿಂಗಸುಗೂರು : ಸರ್ಕಾರದ ಸುತ್ತೋಲೆ ಆಧರಿಸಿ ಕೋವಿಡ್ ನಿಯಮಗಳ ಪಾಲನೆ ಜೊತೆಗೆ ಶಾಲೆಗಳನ್ನು ಆಕರ್ಷಕವಾಗಿ ಸಿಂಗಾರಗೊಳಿಸಿ ತಾಲೂಕಿನಲ್ಲಿ ಶಾಲಾ ಆರಂಭೋತ್ಸವಕ್ಕೆ ಮುನ್ನುಡಿ ಬರೆಯಲಾಗಿದೆ.

ಶಾಲೆಗಳ ಪ್ರಾರಂಭೋತ್ಸವ..

ಒಂಬತ್ತು ತಿಂಗಳಿಂದ ಶಾಲೆಗಳು ಆರಂಭಗೊಂಡಿರಲಿಲ್ಲ. ಇದರಿಂದ ಶಾಲಾ ಸುಧಾರಣ ಸಮಿತಿ, ಪಾಲಕರು,ಮಕ್ಕಳು ಆಸಕ್ತಿ ವಹಿಸಿ ಶಾಲೆಗಳನ್ನು ಸ್ವಚ್ಛಗೊಳಿಸಿ, ತಳಿರು-ತೋರಣ ಕಟ್ಟಿ ರಂಗೋಲಿ ಹಾಕಿರುವುದು ಕಂಡು ಬಂತು.

ಮೊದಲ ದಿನವಾದ ಇಂದು ಬೆರಳೆಣಿಕೆಯಷ್ಟು ಮಕ್ಕಳು ಶಾಲೆಗಳಿಗೆ ಆಗಮಿಸಿದ್ದರು. ಶಾಲೆಗೆ ಬರುವ ಮಕ್ಕಳ ಕೈಗೆ ಶಿಕ್ಷಕರು ಸ್ಯಾನಿಟೈಸರ್ ಹಾಕಿ, ಥರ್ಮಲ್ ಸ್ಕ್ರೀನಿಂಗ್​​ ಮಾಡಿ ಹೂ ನೀಡಿ ಸ್ವಾಗತಿಸಿದ್ರು.

ತಾಲೂಕಿನ 400ಕ್ಕೂ ಹೆಚ್ಚು ಪ್ರಾಥಮಿಕ, ಪ್ರೌಢ ಶಾಲೆಗಳು, ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಇಂದು ಕರ್ತವ್ಯಕ್ಕೆ ಹಾಜರಾಗಿದ್ರು. ಮಕ್ಕಳ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಕಂಡು ಬರಲಿಲ್ಲ. ಕೆಲವೆಡೆ ಥರ್ಮಲ್ ಸ್ಕ್ಯಾನರ್ ಕೊರತೆ ಕಂಡು ಬಂದವು. ಶಿಕ್ಷಣ ಇಲಾಖೆ ಅಧಿಕಾರಿಗಳು ಮಿಂಚಿನ ಸಂಚಾರ ನಡೆಸಿ ಕೋವಿಡ್​​ ಸಲಹೆ-ಸೂಚನೆ ನೀಡಿದರು.

ತಾಲೂಕು ಬಿಆರ್​​ಸಿ ಅಧಿಕಾರಿ ಹನುಮಂತಪ್ಪ ಕುಳಗೇರಿ ಮಾತನಾಡಿ, ಸರ್ಕಾರದ ಮಾರ್ಗಸೂಚಿಗಳನ್ನ ಅಳವಡಿಸಿಕೊಂಡು ಶಾಲೆಗಳು ಆರಂಭಗೊಂಡಿವೆ. ಕೋವಿಡ್ ನಿಯಮ ಪಾಲನೆ, ವಿದ್ಯಾಗಮ ಪದ್ಧತಿ ಆಧರಿಸಿ 6 ರಿಂದ 9ನೇ ತರಗತಿ ಮಕ್ಕಳ ಕಲಿಕೆ ನಡೆಯುತ್ತಿದೆ. 10ನೇ ತರಗತಿ ಮಕ್ಕಳಿಗೆ ಪಠ್ಯ ವಿಷಯ ಬೋಧನೆ ನಡೆಸಲಾಗುವುದು ಎಂದು ತಿಳಿಸಿದ್ರು.
ಇದನ್ನೂ ಓದಿ:ಎಪಿಎಂಸಿ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ: ಅಧಿಸೂಚನೆ ಹೊರಡಿಸಿದ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.