ETV Bharat / state

ಕೈಕೊಟ್ಟ ಮುಂಗಾರು.. ಶೇ.44ರಷ್ಟು ಮಳೆ ಕೊರತೆ : ಬೀಜ ಬಿತ್ತಿ ಆಕಾಶದತ್ತ ಮುಖ ಮಾಡಿದ ರೈತರು

author img

By

Published : Jul 2, 2023, 4:08 PM IST

Updated : Jul 2, 2023, 5:22 PM IST

ರಾಜ್ಯದ ಹಲವೆಡೆ ಮುಂಗಾರು ಮಳೆಯಾಗಿದೆ. ಈ ಸಂದರ್ಭದಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾರೆ. ಆದರೆ ಮುಂಗಾರು ಮಂಕಾಗಿರುವುದರಿಂದ ಉಳುಮೆ ಮಾಡಿ ಬೀಜ ಬಿತ್ತನೆಗೆ ಮುಂದಾಗಿರುವ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

scaracity-of-rain-in-raichur-difficulty-for-the-farmers
ಕೈಕೊಟ್ಟ ಮುಂಗಾರು.. ಶೇ.44ರಷ್ಟು ಮಳೆ ಕೊರತೆ : ಬೀಜ ಬಿತ್ತನೆಗೆ ಮುಂದಾದ ರೈತರಿಗೆ ಸಂಕಷ್ಟ
ಕೈಕೊಟ್ಟ ಮುಂಗಾರು.. ಶೇ.44ರಷ್ಟು ಮಳೆ ಕೊರತೆ : ಬೀಜ ಬಿತ್ತಿ ಆಕಾಶದತ್ತ ಮುಖ ಮಾಡಿದ ರೈತರು

ರಾಯಚೂರು : ರಾಜ್ಯದಲ್ಲಿ ಮುಂಗಾರು ಹಂಗಾಮ ಆರಂಭವಾಗಿದ್ದು, ರೈತರು ಉಳುಮೆ ಮಾಡಿ ಬೀಜ ಬಿತ್ತನೆ ಮಾಡಲು ಮಳೆಗಾಗಿ ಕಾದು ಕುಳಿತಿದ್ದಾರೆ. ಆದರೆ ಮಳೆರಾಯನ ಅವಕೃಪೆಯಿಂದ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ರೈತರ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಆದರೆ ಮುಂಗಾರು ಮಂಕಾಗಿದ್ದು, ಬರದ ಆತಂಕ ರೈತರಿಗೆ ಕಾಡತೊಡಗಿದೆ.

ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗದಿರುವುದರಿಂದ ಶೇ 20ರಷ್ಟು ಮಳೆ ಕೊರತೆ ಉಂಟಾಗಿದೆ. ಬಿತ್ತನೆ ಮಾಡಿದ ಬೀಜಗಳು ಭೂಮಿಯಲ್ಲಿ ಹಾಳಾಗುವ ಭೀತಿ ಒಂದಡೆಯಾದರೆ, ಇನ್ನೊಂದೆಡೆ ಮಳೆಯನ್ನು ನಂಬಿ ಬಿತ್ತನೆ ಮಾಡಿ ಮೊಳಕೆ ಒಡೆದ ಸಸಿಗಳು ಜಮೀನಲ್ಲಿ ಕಮರಿ ಹೋಗುವ ಆತಂಕ ರೈತರಿಗೆ ಎದುರಾಗಿದೆ.

ಪ್ರಸಕ್ತ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 5,41,953 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 2023ರ ಜೂನ್ 1ರವರೆಗೂ 5827 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇದರಲ್ಲಿ ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ತೊಗರಿ ಬೆಳೆಯನ್ನು 1,45,890 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಿದ್ದು, ಇದುವರೆಗೆ 655 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಸೂರ್ಯಕಾಂತಿ 7866 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ಉದ್ದೇಶಿಸಿದ್ದು, 1150 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಹತ್ತಿ 1,53,096 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಿದ್ದು, 3735 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಜಿಲ್ಲೆಯಲ್ಲಿ 2023ರ ಜೂನ್ 1ರಿಂದ 22ರವರೆಗೆ 85.20 ಎಂಎಂ ಮಳೆಯಾಗಬೇಕಾಗಿತ್ತು. ಆದರೆ ಕೇವಲ 47.50 ಎಂಎಂ ಮಳೆ ಸುರಿದಿದೆ. 44 ಎಂಎಂನಷ್ಟು ಮಳೆ ಕೊರತೆ ಉಂಟಾಗಿದೆ. ಅಲ್ಲದೇ ಕಳೆದ ವಾರದಿಂದ ವಾಡಿಕೆಯಂತೆ 21 ಎಂಎಂ ಮಳೆಯಾಗಬೇಕಾಗಿತ್ತು. ಆದರೆ 17 ಎಂಎಂ ಮಳೆಯಾಗಿದ್ದು, 4 ಎಂಎಂ ಮಳೆ ಕೊರತೆ ಎದುರಾಗಿದೆ. ಜಿಲ್ಲೆಯಲ್ಲಿ ಈ ತಿಂಗಳ ಕೊನೆಯವರೆಗೆ ಮುಂಗಾರು ಬಿತ್ತನೆ ಕಾರ್ಯಕ್ಕೆ ಅವಕಾಶವಿದ್ದು, ತಡವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಜಿಲ್ಲೆಯಲ್ಲಿ ಕಳೆದ ವರ್ಷ ಮುಂಗಾರು ಹಂಗಾಮಿಗೆ ಮಳೆ ಸುರಿದಿದ್ದು, ಬಿತ್ತನೆ ಕಾರ್ಯ ಸರಿಯಾಗಿ ನಡೆದಿತ್ತು. ಆದರೆ ಈ ಬಾರಿ ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ಚುರುಕುಗೊಂಡಿಲ್ಲ. ಅಲ್ಲದೇ ಮಳೆಯಾದರೆ ಬಿತ್ತನೆ ಮಾಡುವುದಕ್ಕೆ ರೈತರು ಎಲ್ಲಾ ರೀತಿಯ ಬೀಜ, ಗೊಬ್ಬರ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಆದರೆ ಮಳೆಯಾಗಿಲ್ಲ. ಮಳೆಯಾಗುವ ನಿರೀಕ್ಷೆಯಲ್ಲಿ ಇದ್ದೇವೆ ಎಂದು ರೈತ ಬೂದಯ್ಯ ಸ್ವಾಮಿ ಹೇಳಿದ್ದಾರೆ.

ರೈತರಿಗೆ ಬಿತ್ತನೆಗೆ ಬೇಕಾಗುವ ಬೀಜ ಮತ್ತು ರಸಗೊಬ್ಬರು ಎಲ್ಲಾವನ್ನು ಸಹ ಆಯಾ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಈ ತಿಂಗಳ ಕೊನೆಯವರೆಗೂ ಬಿತ್ತನೆಗೆ ಅವಕಾಶವಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶ್ರೀದೇವಿಕಾ ಹೇಳಿದ್ದಾರೆ.

ಇದನ್ನೂ ಓದಿ : ಸರ್ಕಾರಿ ಶಾಲೆಯ ಪಕ್ಕದಲ್ಲೇ ಅಕ್ರಮ ಗಣಿಗಾರಿಕೆ; ನೂರಾರು ಮಕ್ಕಳಿದ್ದರೂ ವಿದ್ಯಾಲಯ ಮುಚ್ಚುವ ಪರಿಸ್ಥಿತಿ!

Last Updated : Jul 2, 2023, 5:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.