ರಾಯಚೂರು: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ತರಕಾರಿ ಮಾರಾಟ ಮಾಡುತ್ತಿದ್ದವರನ್ನು ಎಬ್ಬಿಸಿ, ಅವರ ತರಕಾರಿಯನ್ನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬೂಟ್ ಕಾಲಿನಿಂದ ಒದ್ದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಗರದ ಸದರ್‌ಬಜಾರ್ ಪಿಎಸ್‌ಐ ತರಕಾರಿಯನ್ನು ಬೂಟ್ ಕಾಲಿನಿಂದ ಒದ್ದಿದ್ದಾರೆ. ರಾಯಚೂರು ಜಿಲ್ಲೆಯಾದ್ಯಂತ ವಾರದ ಲಾಕ್‌ಡೌನ್ ಜಾರಿ ಮಾಡಲಾಗಿದ್ದು, ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಅಗತ್ಯ ವಸ್ತುಗಳ ಮಾರಾಟ ಸೇರಿದಂತೆ ಎಲ್ಲವನ್ನು ನಿರ್ಬಂಧಿಸಲಾಗಿದೆ.
ಆದ್ರೆ ಹಳ್ಳಿಯಿಂದ ಬರುವ ತರಕಾರಿ ವ್ಯಾಪಾರಿಗಳು, ನಗರದ ಚಂದ್ರಮೌಳೇಶ್ವರ ವೃತ್ತದಿಂದ ಪಟೇಲ್ ರಸ್ತೆಗೆ ತೆರಳುವ ರಸ್ತೆಯ ಬದಿಯಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ತರಕಾರಿ ಮಾರಾಟದಲ್ಲಿ ತೊಡಗಿದ್ದರು. ಇದನ್ನು ಕಂಡು ಕೆರಳಿದ ಪಿಎಸ್‌ಐ ಕೆಲ ತರಕಾರಿ ವ್ಯಾಪಾರಸ್ಥರ ತರಕಾರಿಯನ್ನು ಬೂಟ್ ಕಾಲಿನಿಂದ ಒದ್ದು, ವ್ಯಾಪಾರ ಬಂದ್ ಮಾಡುವಂತೆ ಎಚ್ಚರಿಸಿ ತೆರವುಗೊಳಿಸಿದರು.
ಇದನ್ನೂ ಓದಿ: 2ನೇ ಮದುವೆ: ಪುಟ್ಟ ಕಂದನನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ!