ರಾಯಚೂರು: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಜಿಲ್ಲೆಗೆ ಮರಳಿ ಬಂದಿರುವ ಸೈನಿಕರಿಗೆ ವಿವಿಧ ಸಂಘಗಳ ವತಿಯಿಂದ ಸನ್ಮಾನ ಮಾಡಲಾಯಿತು.
ನಗರದ ಕನ್ನಡ ಭವನದಲ್ಲಿ ರೈತರ ಮತ್ತು ಸೈನಿಕರ ಅಭಿಮಾನಿಗಳ ಸಂಘ, ಗ್ರೀನ್ ರಾಯಚೂರು, ಕಲಾ ಸಂಕುಲ ಸಂಘದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ನಿವೃತ್ತಿ ಹೊಂದಿರುವ ಸೈನಿಕರಿಗೆ ಸನ್ಮಾನಿಸಲಾಯಿತು. ಸತತ 17 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ, ಇದೀಗ ನಿವೃತ್ತಿ ಹೊಂದಿ ತಾಯಿ ನಾಡಿಗೆ ಆಗಮಿಸಿರುವುದರಿಂದ ಗೌರವಾರ್ಥವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಡಾ.ಶಿವರಾಜ್ ಪಾಟೀಲ್, ಆರ್.ಡಿ.ಎ. ಅಧ್ಯಕ್ಷ ಗೋಪಿಶೆಟ್ಟಿ ಸೇರಿದಂತೆ ಸಂಘದ ಮುಖಂಡರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದರು.