ರಾಯಚೂರು: ಕೃಷ್ಣಾ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿಬಿಟ್ಟ ಪರಿಣಾಮ ಹೂವಿನ ಹೆಡಗಿ ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ನಾರಾಯಣಪುರ ಡ್ಯಾಂನಿಂದ 1.84 ಲಕ್ಷ ಕ್ಯೂಸೆಕ್ ನೀರನ್ನು ಹರಿ ಬಿಡಲಾಗಿದ್ದು, ಜಿಲ್ಲೆಯ ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆಗೆ ನೀರು ಸಮೀಪವಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿ, ಜಾಲಹಳ್ಳಿ ಮಾರ್ಗ ಸಂಚಾರವನ್ನು ಬದಲಾಯಿಸಲಾಗಿದೆ. ಸೇತುವೆ ಮೇಲೆ ಯಾರೂ ಓಡಾಡದಂತೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ದೇವದುರ್ಗ ತಾಲೂಕಿನ ಕೊಪ್ಪರ ಶ್ರೀ ಲಕ್ಷ್ಮಿ ನರಸಿಂಹ ದೇವಾಲಯ ಹಾಗೂ ಗೂಗಲ್‌ನ ಶ್ರೀ ಅಲ್ಲಮ್ಮಪ್ರಭು ದೇಗುಲಕ್ಕೆ ನೀರು ಸನಿಹಕ್ಕೆ ಬಂದಿದ್ದು, ದೇವರಿಗೆ ಜಲಕಂಟಕ ಎದುರಾಗಿದೆ.