ರಾಯಚೂರು : ಮೀಸಲಾತಿಗಾಗಿ ಹಲವು ಸಮಾಜಗಳಿಂದ ಹೋರಾಟ ನಡೆದಿದ್ದು, ಸರ್ಕಾರ ಜಯಪ್ರಕಾಶ್ ಹೆಗಡೆಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದೆ. ಇದರ ವರದಿ ಬಂದ ನಂತರ ಸಿಎಂ ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಲಿಂಗಸೂಗೂರು ತಾಲೂಕಿನ ಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಕುರಿತಂತೆ ಅಧ್ಯಯನ ನಡೆಸಲು ಸರ್ಕಾರ ಸಮಿತಿ ರಚನೆ ಮಾಡಿದೆ. ಸಮಿತಿಯ ಅಧ್ಯಯನದ ವರದಿ ಬಂದ ನಂತರ ಸಿಎಂ ಯಡಿಯೂರಪ್ಪ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಹಟ್ಟಿ ಚಿನ್ನದ ಗಣಿಯಲ್ಲಿ ಚಿನ್ನ ಉತ್ಪಾದನೆ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಸಕ್ತ ವರ್ಷದಲ್ಲಿ ಚಿನ್ನದ ಗಣಿಯಲ್ಲಿ 1,700 ಕೆಜಿ ಚಿನ್ನ ಉತ್ಪಾದನೆ ಆಗಿದೆ. ಹಟ್ಟಿ ಚಿನ್ನದ ಗಣಿ ಆಧುನೀಕರಣಗೊಳಿಸುವ ಚಿಂತನೆ ನಡೆದಿದೆ ಎಂದರು.
ಕಲ್ಲು ಗಣಿಗಾರಿಕೆಯಲ್ಲಿ ಸ್ಫೋಟ ವಿಚಾರದಲ್ಲಿ ಅವೈಜ್ಞಾನಿಕತೆಯಿಂದ ಗಣಿಗಾರಿಕೆಯಲ್ಲಿ ಬ್ಲಾಸ್ಟ್ ಆಗಿದೆ. ಇದನ್ನು ತಡೆಯಲು ಮೈನಿಂಗ್ ಕೋರ್ಸ್ ಪ್ರಾರಂಭಿಸಲಾಗುವುದು. ಉತ್ತರ ಕರ್ನಾಟಕ, ಬೆಂಗಳೂರಿನಲ್ಲಿ ಕ್ಲಾಸ್ ಆರಂಭ ಮಾಡಿಲ್ಲ. ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಮೈನಿಂಗ್ ಕೋರ್ಸ್ ಆರಂಭ ಮಾಡಲಾಗುವುದು. ರಾಜ್ಯಾದ್ಯಂತ ಅಕ್ರಮ ಮರಳು ವಿಚಾರದಲ್ಲಿ ಮರಳು ನೀತಿಯನ್ನು ಸರಳೀಕರಣ ಮಾಡುತ್ತಿದ್ದೇವೆ. ಮರಳು ಸರಳವಾಗಿ ಸಿಗುವಂತೆ ಆಗಿದ್ರೆ ಅಕ್ರಮದ ಮಾತೆ ಉದ್ಭವಿಸಲ್ಲ ಎಂದರು.