ETV Bharat / state

ಬ್ಲ್ಯಾಕ್​ ಫಂಗಸ್​ ರೋಗಿಗಳ ಚಿಕಿತ್ಸಾ ವೆಚ್ಚ ಸರ್ಕಾರದಿಂದ ಭರಿಸಲು ಸಿಎಂಗೆ ಮನವಿ: ಡಿಸಿಎಂ ಸವದಿ

author img

By

Published : May 18, 2021, 11:34 AM IST

ರಾಯಚೂರಿನಲ್ಲಿ ಪ್ರತಿನಿತ್ಯ 50 ಕೆಎಲ್ ಆಮ್ಲಜನಕ ದೊರೆಯಲಿದೆ ಎಂದು ಡಿಸಿಎಂ ಹೇಳಿದ್ದಾರೆ.

Black Fungus Free Treatment, Request to CM for Black Fungus Free Treatment, DCM Lakshman Savadi, DCM Lakshman Savadi news, ಬ್ಲ್ಯಾಕ್​ ಫಂಗಸ್ ಉಚಿತ ಚಿಕಿತ್ಸೆ, ಬ್ಲ್ಯಾಕ್​ ಫಂಗಸ್​ಗೆ ಉಚಿತ ಚಿಕಿತ್ಸೆಗಾಗಿ ಮನವಿ ಮಾಡಿದ ಲಕ್ಷ್ಮಣ ಸವದಿ,
ಬ್ಲ್ಯಾಕ್​ ಫಂಗಸ್​ಗೆ ಉಚಿತ ಚಿಕಿತ್ಸೆಗಾಗಿ ಮನವಿ ಮಾಡಿದ ಡಿಸಿಎಂ

ರಾಯಚೂರು: ಬ್ಲ್ಯಾಕ್‌ ಫಂಗಸ್ ರೋಗದ ಲಕ್ಷಣ ಪ್ರಕರಣಗಳು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ವರದಿಯಾಗುತ್ತಿದ್ದು, ಈ ರೋಗಿಗಳ ಸಂಪೂರ್ಣ ಚಿಕಿತ್ಸೆ ವೆಚ್ಚ ರಾಜ್ಯ ಸರ್ಕಾರ ವಹಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್ ಜಿಲ್ಲೆಯಲ್ಲಿ 5 ಪ್ರಕರಣಗಳು ಸೇರಿದಂತೆ ರಾಜ್ಯಾದ್ಯಂತ ವರದಿಯಾಗುತ್ತಿದ್ದು, ಇದಕ್ಕೆ ಸುಮಾರು ಏಳು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಇದಕ್ಕೆ 3.5 ಲಕ್ಷ ವೆಚ್ಚವಾಗಲಿದ್ದು, ಬಡ ಹಾಗೂ ಮಧ್ಯಮ ವರ್ಗಕ್ಕೆ ಆರ್ಥಿಕ ಹೊರೆಯಾಗುವುದರಿಂದ ರಾಜ್ಯ ಸರ್ಕಾರ ಇದರ ಸಂಪೂರ್ಣ ಹೊರೆ ಹೊತ್ತು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಮನವಿ ಮಾಡಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ನಗರದ ಕೈಗಾರಿಕಾ ವಲಯದಲ್ಲಿ ಇವರು ಸೂರಾನಾ ಸ್ಟಿಲ್ ಇಂಡಸ್ಟ್ರೀಸ್ ಪ್ರಸ್ತುತ ಸ್ಥಗಿತವಾಗಿದೆ. ಆದರೆ ಇದರಲ್ಲಿ ಆಮ್ಲಜನಕ ಉತ್ಪಾದನೆ ಘಟಕದಿಂದ ಮರು ಉತ್ಪಾದನೆ ಕುರಿತು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಶಸ್ವಿಯಾದಲ್ಲಿ ಪ್ರತಿನಿತ್ಯ 50 ಕೆಎಲ್ ಆಮ್ಲಜನಕ ದೊರೆಯಲಿದೆ ಎಂದರು.

ಜಿಲ್ಲೆಗೆ ಹಂಚಿಕೆಯಾದ ಆಮ್ಲಜನಕದ ಪ್ರಮಾಣ 15 ಕೆಎಲ್​ಗೆ ಹೆಚ್ಚಿಸಬೇಕು. ನಗರದ ನವೋದಯ ಆಸ್ಪತ್ರೆಯಲ್ಲಿ 300 ಆಮ್ಲಜನಕ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಗೆ ಪ್ರತಿನಿತ್ಯ 750 ರೆಮ್ಡಿಸಿವಿರ್ ಚುಚ್ಚುಮದ್ದು ಅವಶ್ಯಕತೆ ಇದೆ. ಬೇಡಿಕೆ ಅನುಸಾರ ಪೂರೈಕೆ ಮಾಡಲು ಮನವಿ ಮಾಡಲಾಗಿದೆ ಎಂದರು.

ಕೊರೊನಾ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಓಪೆಕ್ ಹಾಗೂ ರಿಮ್ಸ್ ಆಸ್ಪತ್ರೆಯ ಮೇಲುಸ್ತುವಾರಿವಾಗಿ ಕೆಎಎಸ್‌ ಅಧಿಕಾರಿ ನೇಮಕ ಮಾಡಲು ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರ ಆಮ್ಲಜನಕದ ಕೊರತೆ ನೀಗಿಸಲು ಆಮ್ಲಜನಕ ಉತ್ಪಾದನೆ ಯಂತ್ರಗಳನ್ನು ಖರೀದಿಸಿದ್ದು, ಅವುಗಳನ್ನು ಸಾರಿಗೆ ಬಸ್​ನಲ್ಲಿ ಅಳವಡಿಸಿ ರೋಗಿಗಳಿಗೆ ತಾತ್ಕಾಲಿಕ ಆಮ್ಲಜನಕದ ವ್ಯವಸ್ಥೆ ಕಲ್ಪಿಸಲು ಸಾರಿಗೆ ವ್ಯವಸ್ಥೆ ಉಪಯೋಗಿಸಿಕೊಳ್ಳಲು ಚಿಂತನೆ ನಡೆದಿದ್ದು, ಈ ಯೋಜನೆ ರಾಜ್ಯಾದ್ಯಂತ ವಿಸ್ತರಿಸಲಾಗುವುದು.

ಹಟ್ಟಿ ಚಿನ್ನದ ಗಣಿ, ವೈಟಿಪಿಎಸ್ ಹಾಗೂ ಆರ್​ಟಿಪಿಎಸ್​ನಲ್ಲಿ ನೂರು ಆಮ್ಲಜನಕ ಹಾಸಿಗೆಯ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.