ETV Bharat / state

ಒಪೆಕ್ ಕೋವಿಡ್​ ಆಸ್ಪತ್ರೆಯೊಳಗೆ ನುಗ್ಗಿದ್ದ ಹಂದಿಗಳ ಸ್ಥಳಾಂತರ - Raichur News

ರಾಯಚೂರಿನ ಒಪೆಕ್ ಕೋವಿಡ್​ ಆಸ್ಪತ್ರೆಯ ತ್ಯಾಜ್ಯ ಸಂಗ್ರಾಲಯದಲ್ಲಿ ಕಾಣಿಸಿಕೊಂಡ ಹಂದಿಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ವೈದ್ಯಕೀಯ ತ್ಯಾಜ್ಯವನ್ನು ತೆಗೆದು ಸ್ವಚ್ಛ ಮಾಡಲಾಗಿದೆ.

Relocation of pigs inside OPEC Covid hospital
ಒಪೆಕ್ ಕೋವಿಡ್​ ಆಸ್ಪತ್ರೆಯೊಳಗೆ ನುಗ್ಗಿದ್ದ ಹಂದಿಗಳ ಸ್ಥಳಾಂತರ
author img

By

Published : Aug 23, 2020, 4:24 PM IST

ರಾಯಚೂರು: ನಗರದ ಹೊರವಲಯದಲ್ಲಿರುವ ಒಪೆಕ್ ಆಸ್ಪತ್ರೆಯ ತ್ಯಾಜ್ಯ ಸಂಗ್ರಹಾಲಯದಲ್ಲಿ ಕಾಣಿಸಿಕೊಂಡ ಹಂದಿಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಒಪೆಕ್ ಕೋವಿಡ್​ ಆಸ್ಪತ್ರೆಯೊಳಗೆ ನುಗ್ಗಿದ್ದ ಹಂದಿಗಳ ಸ್ಥಳಾಂತರ

ಒಪೆಕ್ ಆಸ್ಪತ್ರೆಯನ್ನು ಸದ್ಯ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಆದರೆ, ಈ ಆಸ್ಪತ್ರೆಗೆ ಹಂದಿಗಳು ಲಗ್ಗೆಯಿಟ್ಟಿದ್ದು, ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಹಂದಿಗಳ ಹಿಂಡು ಸೀದಾ ಒಪೆಕ್ ಆಸ್ಪತ್ರೆಯೊಳಗೆ ನುಗ್ಗಿ ಜಿ-7 ವಾರ್ಡ್​ನ ಕಸದ ರಾಶಿಯನ್ನು ತಿನ್ನುತ್ತಿದ್ದ ದೃಶ್ಯ ಕಂಡುಬಂದಿತ್ತು. ಈ ವಿಷಯ ಮಾಧ್ಯಮಗಳಲ್ಲಿ ವರದಿಯಾಗುತ್ತಿಂತೆ ಎಚ್ಚೆತ್ತುಕೊಂಡ ಆಸ್ಪತ್ರೆ ಆಡಳಿತ ಮಂಡಳಿ ಹಂದಿಗಳನ್ನು ಹಿಡಿದು ಬೇರಡೆ ಸ್ಥಳಾಂತರಿಸಿದ್ದಾರೆ.

ಅಲ್ಲದೆ, ಆಸ್ಪತ್ರೆಯಲ್ಲಿನ ಅವ್ಯವಸ್ಥೆಗೆ ಕಾರಣವಾಗಿದ್ದ ವೈದ್ಯಕೀಯ ತ್ಯಾಜ್ಯವನ್ನು ಸ್ಥಳಾಂತರಿಸಿ, ಸ್ವಚ್ಛ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.