ETV Bharat / state

ಪ್ರವಾಹ ಭೀತಿಯಲ್ಲಿ ಬಿಸಿಲೂರು: ರೆಡ್ ಅಲರ್ಟ್ ಘೋಷಣೆ

ತುಂಗಭದ್ರಾ, ಕೃಷ್ಣಾ ನದಿಯಿಂದ ನೀರು ಹೊರ ಬಿಡಲಾದ ಹಿನ್ನೆಲೆ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಇಂದು ಮಧ್ಯಾಹ್ನದ ವೇಳೆಗೆ 45 ಜನರ ರಕ್ಷಣಾ ತಂಡ ಜಿಲ್ಲೆಗೆ ಆಗಮಿಸುವ ಸಾಧ್ಯತೆಯಿದೆ.

ಪ್ರವಾಹ ಭೀತಿಯಲ್ಲಿ ರಾಯಚೂರು
author img

By

Published : Oct 23, 2019, 9:42 AM IST

ರಾಯಚೂರು: ಜಿಲ್ಲೆಗೆ ತುಂಗಭದ್ರಾ, ಕೃಷ್ಣಾ ಎರಡು ನದಿಗಳಿಂದ ಪ್ರವಾಹ ಭೀತಿ ಎದುರಾಗಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.

ಪ್ರವಾಹ ಭೀತಿಯಲ್ಲಿ ರಾಯಚೂರು

ಕೃಷ್ಣಾ ನದಿಗೆ ನಾರಾಯಣಪುರ ಜಲಾಶಯದಿಂದ ಇಂದು ಬೆಳಿಗ್ಗೆ 6.30 ಕ್ಕೆ 3.17 ಲಕ್ಷ ಕ್ಯೂಸೆಕ್​ ನೀರು ಹರಿ ಬೀಡಲಾಗಿದ್ದು, ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಈಗಾಗಲೇ ತಿಳಿಸಲಾಗಿದೆ. 3 ಲಕ್ಷಕ್ಕೂ ಅಧಿಕ ನೀರು ಹರಿ ಬಿಟ್ಟ ಪರಿಣಾಮ ದೇವದುರ್ಗ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಹೂವಿನಹಡಗಿ ಗ್ರಾಮದ ಸೇತುವೆ ಮೇಲೆ ನೀರು ಬಂದಿರುವುದರಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

ಇನ್ನು ತುಂಗಭದ್ರಾ ಜಲಾಶಯಕ್ಕೂ1.42 ಲಕ್ಷ ಕ್ಯೂಸೆಕ್​ ಒಳಹರಿವಿನ ಪ್ರಮಾಣವಿದ್ದು, ಜಲಾಶಯದ ಹೆಚ್ಚುವರಿ 1.85 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿ ಬೀಡಲಾಗಿದೆ. ಹೀಗಾಗಿ ಸಿಂಧನೂರು ತಾಲೂಕಿನ ಸಿಂಗಾಪುರ್, ಮುಕ್ಕುಂದ, ಒಳ ಬಳ್ಳಾರಿ, ದಢೆಸೂಗೂರು, ಮಾನವಿ ತಾಲೂಕಿನ ಚಿಕಲಪರ್ವಿ ಹಾಗೂ ರಾಯಚೂರು ತಾಲೂಕಿನ ಬಿಚ್ಚಾಲಿ, ಕಟಕನೂರು, ಹಳೆತುಂಗಭದ್ರಾ ನದಿಗೆ ತೆರಳದಂತೆ ಸೂಚಿಸಲಾಗಿದೆ. ಅಲ್ಲದೇ ತುಂಗಭದ್ರಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಎಲೆಬಿಚ್ಚಾಲಿ ಗ್ರಾಮದಲ್ಲಿನ ಜಪದಕಟ್ಟೆ ರಾಯರ ನವಬೃಂದವನ ಬಳಿಗೆ ನೀರು ನುಗ್ಗುತ್ತಿದ್ದು, ಬೃಂದವನ ಮುಳಗಡೆಯಾಗಲಿದೆ.

ಎರಡು ನದಿಗಳು ಉಕ್ಕಿ ಹರಿಯುತ್ತಿರುವ ಹಿನ್ನಲೆ ಮುನ್ನೆಚ್ಚರಿಕಾ ಕ್ರಮವಾಗಿ ರಕ್ಷಣಾ ಪಡೆಯನ್ನ ನಿಯೋಜಿಸುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಮನವಿ ಸಲ್ಲಿಸಿಲಾಗಿದ್ದು, ಇಂದು ಮಧ್ಯಾಹ್ನದ ವೇಳೆ 45 ಜನರ ತಂಡ ಆಗಮಿಸುವ ಸಾಧ್ಯತೆಯಿದೆ.

Intro:¬ಸ್ಲಗ್: ಹೆಚ್ಚಿದ ಪ್ರವಾಹ ಭೀತಿ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 23-1೦-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ಜಿಲ್ಲೆಯಲ್ಲಿ ಎರಡು ನದಿಗಳಿಂದ ಪ್ರವಾಹ ಭೀತಿ ಹೆಚ್ಚಾಗಿದೆ. Body:ಜಿಲ್ಲೆಯ ಬಲಭಾಗದಲ್ಲಿ ಹರಿಯುತ್ತಿರುವ ಕೃಷ್ಣ ನದಿಗೆ ನಾರಾಯಣಪುರ ಜಲಾಶಯದಿಂದ ಇಂದು ಬೆಳಿಗ್ಗೆ 6.30ಕ್ಕೆ 23 ಗೇಟ್ ಗಳಿಂದ 3.17 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬೀಡಲಾಗಿದೆ. ನದಿ ಪಾತ್ರದ ಜನರಿಗೆ ಮುನ್ನಚೆರಿಕೆ ರವಾನಿಸಲಾಗಿದ್ದು, ನಡುಗಡ್ಡೆ ಪ್ರದೇಶಗಳಿಗೆ ವಾಸಿಸುವವ ಜನರಿಗೆ ಎಚ್ಚರಿಕೆ ರವಾನಿಸಲಾಗಿದೆ. 3 ಲಕ್ಷಕ್ಕೂ ಅಧಿಕ ನೀರು ಹರಿದು ಬಿಟ್ಟ ಪರಿಣಾಮ ದೇವದುರ್ಗ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಜಿಲ್ಲೆಯ ಹೂವಿನಹೆಡಗಿ ಗ್ರಾಮದ ಸೇತುವೆ ಮೇಲೆ ನೀರು ಬರುತ್ತಿರುವುದರಿಂದ ವಾಹನಗಳ ಸಂಚಾರ ಸ್ಥಗೀತಗೊಳಿಸಲಾಗಿದೆ. ಇನ್ನೂ ತುಂಗಭದ್ರಾ ಜಲಾಶಯಕ್ಕೂ1.42 ಲಕ್ಷ ಕ್ಯೂಸೆಕ್ಸ್ ನೀರಿ ಒಳಹರಿವಿನ ಪ್ರಮಾಣವಿದ್ದು, ಜಲಾಶಯದ ಹೆಚ್ಚುವರಿ 1.85 ಲಕ್ಷ ಕೂಸೆಕ್ಸ್ ನೀರು ನದಿಗೆ ಹರಿದು ಬೀಡಲಾಗಿದೆ. ಹೀಗಾಗಿ ಸಿಂಧನೂರು ತಾಲೂಕಿನ ಸಿಂಗಾಪುರ್, ಮುಕ್ಕುಂದ, ಒಳಬಳ್ಳಾರಿ, ದಢೆಸೂಗೂರು, ಮಾನವಿ ತಾಲೂಕಿನ ಚಿಕಲಪರ್ವಿ ಹಾಗೂ ರಾಯಚೂರು ತಾಲೂಕಿನ ಬಿಚ್ಚಾಲಿ, ಕಟಕನೂರು, ಹಳೆತುಂಗಭದ್ರಾ ನದಿಗೆ ತೆರಳದಂತೆ ಸೂಚಿಸಲಾಗಿದೆ. ಅಲ್ಲದೇ ಎರಡು ನದಿಗಳಿಂದ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ ತುಂಗಭದ್ರಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಎಲೆಬಿಚ್ಚಾಲಿ ಗ್ರಾಮದಲ್ಲಿನ ಜಪದಕಟ್ಟೆ ರಾಯರ ನವಬೃಂದವನ ಬಳಿಗೆ ನೀರು ನುಗ್ಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ ಅದಲ್ಲಿ ಬೃಂದವನ ಮುಳಗಡೆಯಾಗಲಿದೆ. Conclusion:ಇನ್ನೂ ಎರಡು ನದಿಗಳು ಉಕ್ಕಿ ಹರಿಯುವ ಹಿನ್ನಲೆಯಿಂದಾಗಿ ಮುನ್ನಚೆರಿಕೆ ಕ್ರಮ ಆರ್ಮಿ ರಕ್ಷಣೆ ಪಡೆಯನ್ನ ನಿಯೋಜಿಸುವಂತೆ ಜಿಲ್ಲಾಡಳಿತದಿಂದ ಸರಕಾರಕ್ಕೆ ಮನವಿ ಸಲ್ಲಿಸಿಲಾಗಿದ್ದು, ಇಂದು ಮಧ್ಯಾಹ್ನದ ವೇಳೆ 45 ಜನರ ತಂಡ ಆಗಮಿಸುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.