ರಾಯಚೂರು: ಭತ್ತದ ಗದ್ದೆಗೆ ಕೀಟನಾಶಕ ಸಿಂಪಡಿಸಿರುವ ನೀರು ಕುಡಿದು ಅಸ್ವಸ್ಥಗೊಂಡಿದ್ದ ಗೂಳಿಯೊಂದಕ್ಕೆ ಸ್ಥಳೀಯರು ಚಿಕಿತ್ಸೆ ನೀಡಿ ಮಾನವೀಯತೆ ಮೆರದಿರುವ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಗೂಳಿಯೊಂದು ಬಾಯಾರಿಕೆಯಾಗಿ ಭತ್ತದ ಗದ್ದೆಗೆ ಕೀಟನಾಶಕ ಸಿಂಪಡನೆ ಮಾಡಿದ ನೀರು ಕುಡಿದು ಅಸ್ವಸ್ಥಗೊಂಡಿತ್ತು. ಇದನ್ನು ಕಂಡ ಸ್ಥಳೀಯರು ಕೂಡಲೇ ಪಶುವೈದ್ಯರಿಗೆ ವಿಷಯ ತಿಳಿಸಿದ್ದಾರೆ. ಪಶುವೈದ್ಯ ಬರುವಷ್ಟರಲ್ಲಿ ಗೂಳಿ ತೀವ್ರ ಅನಾರೋಗ್ಯಕ್ಕೆ ಗುರಿಯಾಗಬಹುದೆಂದು ಅವರೇ ಚಿಕಿತ್ಸೆ ನೀಡಿ ಕೆಲ ಹೊತ್ತು ಪ್ರಾಣ ಉಳಿಸಿದ್ದರು. ಬಳಿಕ ವೈದ್ಯರು ಬಂದು ಚಿಕಿತ್ಸೆ ನೀಡಿದ ನಂತರ ಗೂಳಿ ಗುಣಮುಖವಾಯಿತು.