ETV Bharat / state

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಅಪರಾಧಿಗೆ 7 ವರ್ಷ ಜೈಲು, 1ಲಕ್ಷ ರೂ. ದಂಡ - ಅತ್ಯಾಚಾರ ಆರೋಪಿಗೆ ಕಠಿಣ ಶಿಕ್ಷೆ ಲೆಟೆಸ್ಟ್ ನ್ಯೂಸ್

ಮದುವೆಯಾಗುವ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ರಾಯಚೂರು ಜಿಲ್ಲಾ ನ್ಯಾಯಾಲಯವು ಇಂದು ವಿಚಾರಣೆ ನಡೆಸಿ, ಅಪರಾಧ ದೃಢಪಟ್ಟ ಹಿನ್ನೆಲೆಯಲ್ಲಿ ಅಪರಾಧಿಗೆ 7 ವರ್ಷ ಸಜೆ ನೀಡಿದೆ.

Rape convict got 7 years in prison, 1.02,500 fine
ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ: ಆರೋಪಿಗೆ 7 ವರ್ಷ ಕಾರಾಗೃಹ, 1.02,500 ದಂಡ
author img

By

Published : Dec 21, 2019, 9:12 PM IST

ರಾಯಚೂರು: ಮದುವೆಯಾಗುವುದಾಗಿ ಹೇಳಿ ಯುವತಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ್ದ ಅಪರಾಧಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ 1,02,500 ದಂಡ ವಿಧಿಸಿ ಆದೇಶ ಹೊರಡಿಸಿದೆ.

ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪೊಲೀಸ್ ಠಾಣೆಯ ಬಂಡೆಭಾವಿ ಗ್ರಾಮದ ನಿವಾಸಿ ತಿಮ್ಮಣ್ಣ (22) ಶಿಕ್ಷೆಗೆ ಗುರಿಯಾದ ಅಪರಾಧಿ. ಈತ ಅದೇ ಗ್ರಾಮದ ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದರಿಂದ ಆಕೆ ಗರ್ಭಿಣಿಯಾಗಿದ್ದಳು. ಬಳಿಕ ಮದುವೆಗೆ ನಿರಾಕರಿಸಿ ವಂಚಿಸಿದ್ದ.

ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಲಿಂಗಸುಗೂರಿನ ಆರಕ್ಷಕ ವೃತ್ತ ನಿರೀಕ್ಷಕ ವಿ.ಎಸ್.ಹಿರೇಮಠ ತನಿಖೆ ಮಾಡಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಕುರಿತು ಇಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬೈಲೂರು ಶಂಕರ ರಾಮ ಅವರು ಸೂಕ್ತ ಸಾಕ್ಷ್ಯಾಧಾರ ಪರಿಶೀಲಿಸಿ, ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ತಿಮ್ಮಣ್ಣಗೆ 7 ವರ್ಷ ಜೈಲು ಶಿಕ್ಷೆ ಹಾಗೂ 1,02,500 ದಂಡ ವಿಧಿಸಲಾಗಿದೆ. ಇದರಲ್ಲಿ ಒಂದು ಲಕ್ಷ ರೂ. ಹಣವನ್ನು ಸಂತ್ರಸ್ತೆಗೆ ನೀಡಲು ಆದೇಶಿಸಲಾಗಿದೆ.

Intro:ಅತ್ಯಾಚಾರ: ಆರೋಪಿಗೆ 7 ವರ್ಷ ಕಾರಾಗೃಹ,ಹಾಗೂ 1.02,500 ದಂಡ
ರಾಯಚೂರು.
ಡಿ.21
ಮದುವೆಯಾಗುವುದಾಗಿ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ ಆರೋಪಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಆರೋಪಿಗೆ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ 1,02,500 ದಂಡ ವಿಧಿಸಿ ಆದೇಶ ಹೊರಡಿಸಿದೆ.
.Body:ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪೊಲೀಸ್ ಠಾಣೆಯ ಬಂಡೆಭಾವಿ ಗ್ರಾಮದ ನಿವಾಸಿ ತಿಮ್ಮಣ್ಣ (22) ಆರೋಪಿಯಾಗಿದ್ದು ಈತ ಅದೇ ಗ್ರಾಮದ ಯಲ್ಲಮ್ಮ ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದ ಪರಿಣಾಮ ಸಂತ್ರಸ್ಥೆ ಗರ್ಭ ಧರಿಸಿದ್ದು ನಂತರ ಮದುವೆಗೆ ನಿರಾಕರಿಸಿದ್ದಾನೆ.
ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಲಿಂಗಸುಗೂರಿನ ಅರಕ್ಷಕ ವೃತ್ತ ನಿರೀಕ್ಷಕ ವಿ.ಎಸ್.ಹಿರೇಮಠ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.
ಪ್ರಕರಣದ ಕುರಿತು ಇಂದು ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಬೈಲೂರು ಶಂಕರ ರಾಮ ಸೂಕ್ತ ಸಾಕ್ಷ್ಯಾಧಾರ ಪರಿಶೀಲಿಸಿ ಅಪರಾಧ ಸಾಬೀತು ಆದ ಹಿನ್ನೆಲೆಯಲ್ಲಿ ಆರೋಪಿ ತಿಮ್ಮಣ್ಣ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ 1,02,500 ದಂಡ ವಿಧಿಸಿ ಅದ್ರಲ್ಲಿ ಒಂದು ಲಕ್ಷ ರೂ ಸಂತ್ರೆಸ್ಥೆಗೆ ನೂಡಲು ಆದೇಶಿಸಿದೆ.
ಸರಕಾರದ ಪರವಾಗಿ ಪ್ರಧಾನ ಸಾರ್ವಜನಿಕ ಅಭಿಯೋಜಕ ಪಿ.ಎಕ್ಬಾಲ್ ಅಹ್ಮದ್ ವಾದ ಮಂಡಿಸಿದ್ದರುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.