ರಾಯಚೂರು : ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ನಿರಂತರವಾಗಿ ಜಿಟಿ-ಜಿಟಿ ಮಳೆ ಸುರಿಯುತ್ತಿದೆ.
ಇದರ ಪರಿಣಾಮ ರಾಯಚೂರು ಜಿಲ್ಲೆಯಲ್ಲೀಗ ಮಲೆನಾಡ ವಾತಾವರಣ ನಿರ್ಮಾಣವಾಗಿದೆ. ನಿರಂತರ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುತ್ತಿದ್ದು, ಚರಂಡಿಯಲ್ಲಿ ಮಳೆ ನೀರು ತುಂಬಿ ಹರಿಯುತ್ತಿದೆ.
ಇದಲ್ಲದೆ ರಾಯಚೂರು ಹಾಗೂ ಸಿಂಧನೂರಿನಲ್ಲಿ ಕೊರೊನಾ ಭೀತಿ ಹಿನ್ನೆಲೆ ಲಾಕ್ಡೌನ್ ಸಹ ಜಾರಿಯಲ್ಲಿದ್ದು, ಅಲ್ಲಲ್ಲಿ ಲಾಕ್ಡೌನ್ಗೂ ತಲೆಕೆಡಿಸಿಕೊಳ್ಳದ ವಾಹನ ಸವಾರರು ಓಡಾಟ ನಡೆಸಿದ್ದು ಕಂಡು ಬಂದಿದೆ. ಅಂತಹವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಮನೆಗೆ ಕಳುಹಿಸುತ್ತಿರುವ ದೃಶ್ಯ ಕಂಡು ಬಂತು.