ರಾಯಚೂರು: ಲಾಕ್‌ಡೌನ್ ಬೆಂಬಲಿಸಿ ಬಂದ್ ಮಾಡಿರುವ ಮಳಿಗೆಗಳ ತಿಂಗಳ ಬಾಡಿಗೆ ತೆಗೆದುಕೊಳ್ಳದಿರೋ ನಿರ್ಧಾರವನ್ನ ಜಿಲ್ಲೆಯ ವಾಣಿಜ್ಯ ಮಳಿಗೆ ಮಾಲೀಕರೊಬ್ಬರು ತೆಗೆದುಕೊಂಡು ಮಾನವೀಯತೆ ಮೆರೆದಿದ್ದಾರೆ.
ಲಾಕ್‌ಡೌನ್ ಹಿನ್ನೆಲೆ 21 ದಿನಗಳ ಕಾಲ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆದ ಹಿನ್ನೆಲೆ ಸಿರವಾರ ಪಟ್ಟಣದ ವಾಣಿಜ್ಯ ಮಳಿಗೆಗಳ ಮಾಲೀಕ ಅರಕೇರಾ ಶಿವಶರಣ ಸಾಹುಕಾರ ಎಂಬುವವರು ಬಾಡಿಗೆ ನೀಡಿರುವ ತಮ್ಮ ಮಳಿಗೆಗಳಿಂದ ತಿಂಗಳ ಬಾಡಿಗೆ ತೆಗೆದುಕೊಳ್ಳುವುದನ್ನು ನಿಲ್ಲಿಸಿ ವ್ಯಾಪಾರಿಗಳ ಕಷ್ಟಕ್ಕೆ ಸ್ಪಂದಿಸಿದ್ದಾರೆ.
ಬಾಡಿಗೆದಾರರು ತಮ್ಮ ವ್ಯಾಪಾರ-ವಹಿವಾಟಿನಿಂದ ಬಂದ ಆದಾಯದಲ್ಲಿ ಮಳಿಗೆ ಹಾಗೂ ಅಂಗಡಿ ಬಾಡಿಗೆ ಕಟ್ಟಿ ಜೀವನ ಸಾಗಿಸುತ್ತಿದ್ರು. ಆದ್ರೆ ಅಂಗಡಿ ಮುಚ್ಚಿದ ಪರಿಣಾಮ ವ್ಯಾಪಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ನಾವು ಸಹ ಲಾಕ್‌ಡೌನ್ ಬೆಂಬಲಿಸಿದವರ ನೆರವಿಗೆ ಧಾವಿಸಬೇಕು ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿವಶರಣ ಸಾಹುಕಾರ ತಿಳಿಸಿದ್ದಾರೆ.