ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಉದ್ಬಾಳ(ಯು) ಮತ್ತು ದಢೇಸೂಗೂರು ತಾಲೂಕು ಪಂಚಾಯಿತಿ ಕ್ಷೇತ್ರದ ಉಪಚುನಾವಣೆ ನಡೆಯಿತು. 2 ತಾಲೂಕು ಪಂಚಾಯಿತಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.
ಉದ್ಬಾಳ(ಯು) ತಾಲೂಕು ಪಂಚಾಯಿತಿ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 10,013 ಮತದಾರರಿದ್ದು, ಇವರಲ್ಲಿ 4928 ಪುರುಷ, 5085 ಮಹಿಳಾ ಮತದಾರರಿದ್ದರು. ನಿನ್ನೆ ನಡೆದ ಚುನಾವಣೆಯಲ್ಲಿ 5665 ಮತಗಳು ಚಲಾವಣೆಯಾಗಿದ್ದು, ಶೇ. 56.58ರಷ್ಟು ಮತದಾನವಾಗಿದೆ. ಇನ್ನು ಕಾಂಗ್ರೆಸ್ನಿಂದ ರಾಮಣ್ಣ, ಜೆಡಿಎಸ್ನಿಂದ ಸಲೀಂ ರಾಜು, ಬಿಜೆಪಿಯಿಂದ ಸಿದ್ದಪ್ಪ ಕಣದಲ್ಲಿದ್ದಾರೆ.
ದಢೇಸೂಗೂರು ತಾಲೂಕು ಪಂಚಾಯಿತಿ ಕ್ಷೇತ್ರದಲ್ಲಿ 3309 ಮಹಿಳೆಯರು, 3106 ಪುರುಷ ಮತದಾರಿದ್ದು, ಒಟ್ಟು 6415 ಮತದಾರರಿದ್ದರೆ. ಇವರಲ್ಲಿ 4110 ಮತದಾರರು ಮತ ಚಲಾಯಿಸಿದ್ದು, ಶೇ. 64.7ರಷ್ಟು ಮತದಾನವಾಗಿದೆ. ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ನಿಂದ ಪಾರ್ವತಿ, ಜೆಡಿಎಸ್ನಿಂದ ರತ್ನಮ್ಮ ಬಸವರಾಜ ಕೋರಿ, ಬಿಜೆಪಿಯಿಂದ ಮಾನಮ್ಮ ರಾಮಣ್ಣ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಖಾಜಾ ಬನಿ ಕಣದಲ್ಲಿದ್ದಾರೆ.