ETV Bharat / state

ರೈತರ ಜಮೀನುಗಳು ಜಲಾವೃತ.. ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್​ ತೆರೆಯಲು ಹರಹಾಹಸ - ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್

ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್​ನ 194 ಗೇಟ್​ಗಳಲ್ಲಿ ಕೇವಲ 96 ಗೇಟ್​ಗಳನ್ನು ತೆರೆಯಲಾಗಿದೆ. ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ ಯಾದಗಿರಿ, ರಾಯಚೂರಿನ ರೈತರ ಭೂಮಿ ಜಲಾವೃತಗೊಂಡಿದೆ.

Gurjapur Bridge Co. Barrage gates opening operation continued
ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್​ಗಳ ತೆರೆಯುವ ಕಾರ್ಯಾಚರಣೆ
author img

By

Published : Jul 17, 2022, 5:06 PM IST

ರಾಯಚೂರು: ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್​​ಗಳನ್ನು ತೆಗೆಯುವ ಕಾರ್ಯ ಮುಂದುವರೆದಿದೆ. ಕೇರಳದ ಸ್ವಿಮ್ಮಿಂಗ್ ಪರಿಣಿತರಿಂದ ಈ ಕೆಲಸ ನಿರಂತರವಾಗಿ ನಡೆಯುತ್ತಿದೆ. ತಾಲೂಕಿನ ಗುರ್ಜಾಪುರ ಸೇತುವೆ ಮೇಲೆ ಆರ್​​ಟಿಸಿಪಿಎಸ್ ಅಧಿಕಾರಿಗಳ ತಂಡ ಸ್ಥಳದಲ್ಲೇ ಬೀಡುಬಿಟ್ಟಿದೆ.

ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್​ಗಳ ತೆರೆಯುವ ಕಾರ್ಯಾಚರಣೆ

ಸ್ಟ್ರಕ್ ಆಗಿರುವ ಗೇಟ್ ತೆಗೆಯಲು ಪರಿಣಿತರು ಜೆಸಿಬಿ ಸಹಾಯದೊಂದಿಗೆ ಹರಸಹಾಸ ಪಡುತ್ತಿದ್ದಾರೆ. ಲಕ್ಷಾಂತರ ಕ್ಯೂಸೆಕ್​ ನೀರನ್ನು ನದಿಗೆ ಹರಿಬಿಟ್ಟ ಪರಿಣಾಮ, ಕಾರ್ಯಾಚರಣೆ ಪ್ರವಾಹ, ಮೊಸಳೆಗಳ ಭೀತಿಯ ನಡುವೆ ನಡೆಯುತ್ತಿದೆ. 194 ಗೇಟುಗಳ ಪೈಕಿ ಈಗ ಕೇವಲ 98 ಗೇಟ್​ಗಳು ಮಾತ್ರ ಓಪನ್ ಆಗಿವೆ‌. ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ ಅಧಿಕಾರಿಗಳ ಎಡವಟ್ಟಿನಿಂದ ಯಾದಗಿರಿ, ರಾಯಚೂರಿನ ರೈತರ ಜಮೀನುಗಳು ಜಲಾವೃತವಾಗಿವೆ.

ಇದನ್ನೂ ಓದಿ: ರಾಯಚೂರು: ಜೆಸಿಬಿಯ ಬಕೆಟ್​ನಲ್ಲಿ ಕುಳಿತು ಬ್ಯಾರೇಜ್ ಗೇಟ್‌ ತೆರೆಯಲು ಹರಸಾಹಸ... VIDEO

ನಾರಾಯಣಪುರ ಡ್ಯಾಂ‌ನಿಂದ ನೀರು ಬಿಡುಗಡೆ ಮುನ್ನವೇ ತೆರೆಯಬೇಕಿದ್ದ ಗೇಟ್​ಗಳನ್ನು, ಈಗ 1 ಲಕ್ಷ 73 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಟ್ಟ ವೇಳೆ ತೆಗೆಯಲು ಮುಂದಾಗಿದ್ದಾರೆ. ಗೇಟ್‌ಗಳ ಭಾರ ಹತ್ತು ಟನ್​ಗೂ ಅಧಿಕ ಎನ್ನಲಾಗುತ್ತಿದೆ. ಆದ್ರೆ ಕ್ರೇನ್​ನ ಹೈಡ್ರೋ ಕೇವಲ ಎರಡು ಟನ್ ಒತ್ತಡ ಸಾಮರ್ಥ್ಯ ಹಿನ್ನೆಲೆ ಸ್ವಿಮ್ಮಿಂಗ್ ಎಕ್ಸ್ ಪರ್ಟ್ಸ್ ಕೂಡ ಗೇಟ್ ಓಪನ್ ಮಾಡಲು ಪರದಾಡುತ್ತಿದ್ದಾರೆ. ಅಲ್ಲದೇ ನೀರಿನ ರಭಸದಿಂದ ಕಾರ್ಯಾಚರಣೆ ಪದೇ ಪದೇ ಸ್ಥಗಿತವಾಗುತ್ತಿದೆ ಎನ್ನಲಾಗುತ್ತಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.