ರಾಯಚೂರು: ಲಿಂಗಸುಗೂರು ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳ ಮುಂಭಾಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು.
ಇಂದು ದೇವರಭೂಪುರ, ಕನ್ನಾಳ ಸೇರಿದಂತೆ ಇತರ ಗ್ರಾಮ ಪಂಚಾಯಿತಿಗಳ ಮುಂಭಾಗ ಪ್ರತಿಭಟನೆ ನಡೆಸಿದ ನೌಕರರು, ಪಂಚಾಯಿತಿಗಳಲ್ಲಿ ಕೆಲಸ ಮಾಡುವವರನ್ನು ಎಫ್.ಇ.ಎಂ.ಎಸ್ ಅಡಿ ಸೇರ್ಪಡೆ ಮಾಡಬೇಕು. 14ನೇ ಹಣಕಾಸು ಯೋಜನೆ ಅಡಿ ನೌಕರರಿಗೆ ವೇತನ ನೀಡಬೇಕು, ಪಂಪ್ ಆಪರೇಟರ್ ಅವರಿಗೆ ಕರ ವಸೂಲಿಗಾರ ಎಂದು ಬಡ್ತಿ ನೀಡಬೇಕು ಎಂದು ಆಗ್ರಹ ಪಡಿಸಿದರು.
ಇನ್ನು ನೌಕರರಿಗೆ ಸಮವಸ್ತ್ರ ಮತ್ತು ಕೊರೊನಾ ನಿಯಂತ್ರಣಕ್ಕಾಗಿ ಆರೋಗ್ಯ ಕಿಟ್ ಪೂರೈಸಬೇಕು. ನಿಯಮ ಬಾಹಿರವಾಗಿ ನೇಮಕ ಆದವರನ್ನು ಕೆಲಸದಿಂದ ತೆಗೆದು ಹಾಕುವಂತೆ ಮನವಿ ಮಾಡಿದರು.