ರಾಯಚೂರು: ಕೊರೊನಾ ಪಾಸಿಟಿವ್ ಪ್ರಕರಣಗಳ ಪತ್ತೆ ಹಿನ್ನೆಲೆಯಲ್ಲಿ ರಾಯಚೂರು ನಗರವನ್ನು ಇಂದು ಒಂದು ದಿನದ ಮಟ್ಟಿಗೆ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ.
ರಾಯಚೂರು ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ ನಾಲ್ವರಿಗೆ ಕೊರೊನಾ ಪಾಟಿಸಿವ್ ಬಂದ ಹಿನ್ನೆಲೆ ಪ್ರಾಥಮಿಕ, ದ್ವೀತಿಯ ಸಂಪರ್ಕ ಪತ್ತೆ ಹಚ್ಚುವುದಕ್ಕೆ ಒಂದು ದಿನದ ಮಟ್ಟಿಗೆ ಲಾಕ್‌ಡೌನ್ ಮಾಡಲಾಗಿದೆ. ಹೀಗಾಗಿ ಬೆಳಿಗ್ಗೆಯಿಂದ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಬೆಳಿಗ್ಗೆ ತರಕಾರಿ, ಹಾಲಿನ ವ್ಯಾಪಾರ ನಡೆದಿದೆ.
ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಪೊಲೀಸರು ನಾಕಾಬಂದಿ ಹಾಕಿದ್ದು, ಜನರ ಓಡಾಟ ವಿರಳವಾಗಿದೆ. ಇನ್ನು ಇಂದಿನಿಂದ ಬಸ್ ಸಂಚಾರ ಆರಂಭ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ನಗರದಿಂದ ಕಲಬುರಗಿ, ಗಂಗಾವತಿ, ಸಿಂಧನೂರು, ದೇವದುರ್ಗ, ಸುರಪುರ ಸೇರಿದಂತೆ ನಾನಾ ಕಡೆ ಬಸ್ ಸಂಚಾರವನ್ನ ಆರಂಭಿಸಲಾಗಿದೆ.
ಬೆಳಿಗ್ಗೆ 7 ಗಂಟೆಯಿಂದ 8.30ರವರೆಗೆ ಐದಾರು ಬಸ್ಗಳು ಸಂಚರಿಸಿವೆ. ಪ್ರಯಾಣಿಕರು ಸಹ ಬರುತ್ತಿದ್ದು, ಬಸ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪ್ರಯಾಣಿಕರನ್ನು ಕರೆದುಕೊಂಡು ಹೋಗಲಾಗುತ್ತಿದೆ.