ETV Bharat / state

ರಾಯಚೂರು ನಡುಗಡ್ಡೆ ಪ್ರದೇಶಗಳ ಬೆಳೆ ನೀರು ಪಾಲು, ಕಂಗಾಲಾದ ರೈತರು - ಮುಖ್ಯಮಂತ್ರಿ ಸಂತ್ರಸ್ತರ ನಿಧಿ

ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಕಾರಣ ರಾಯಚೂರು ತಾಲೂಕಿನ ಗ್ರಾಮಸ್ಥರು ಆತಂಕದಲ್ಲಿದ್ದು, ಹಲವು ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆ ಭತ್ತ, ತೊಗರಿ, ಹತ್ತಿ ಸಂಪೂರ್ಣ ನೀರು ಪಾಲಾಗಿದೆ.

raichur flood: crop covered with water
author img

By

Published : Aug 10, 2019, 4:08 AM IST

ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಕಾರಣ ರಾಯಚೂರು ತಾಲೂಕಿನ ಗ್ರಾಮಸ್ಥರು ಆತಂಕದಲ್ಲಿದ್ದು, ನಡುಗಡ್ಡೆ ಪ್ರದೇಶದಲ್ಲಿ ಭತ್ತ, ತೊಗರಿ, ಹತ್ತಿ ಬೆಳೆ ಸಂಪೂರ್ಣ ನಾಶವಾಗಿದೆ.

ಕಣ್ಣಿಗೆ ಕಣ್ಣಿಟ್ಟು ಬೆಳೆದ ಬೆಳೆ ರೈತರು ಈಗ ನೀರು ಪಾಲಾಗಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ. ಬರಪೀಡಿತ ಜಿಲ್ಲೆಗೆ ಮಹಾಮಳೆ ಈಗ ರೈತರ ಬದುಕು ಬರಿದು ಮಾಡಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಲಾಗಿತ್ತು. ಕೈಗೆ ಬಂದ ಬೆಳೆ ಬಾಯಿಗೆ ಸಿಗದಂತಾಗಿದೆ. ನಮಗಾಗಿರುವ ನಷ್ಟಕ್ಕೆ ಪರಿಹಾರ ಯಾರು ಕೊಡುತ್ತಾರೆ ಎಂದು ರೈತ ಅಭಿಷೇಕ 'ಈಟಿವಿ ಭಾರತ' ಜೊತೆಗೆ ಅಳಲು ತೋಡಿಕೊಂಡರು.

ನಡುಗಡ್ಡೆ ಪ್ರದೇಶಗಳ ಬೆಳೆ ನೀರು ಪಾಲು

ಕೃಷ್ಣಾ ನದಿಗೆ ಯಥೇಚ್ಛವಾಗಿ ನಿತ್ಯ 4 ಲಕ್ಷ ಕ್ಯೂಸೆಕ್​ ನೀರನ್ನು ಬಿಡುತ್ತಿರುವುದರಿಂದ ತಾಲೂಕಿನ ಆತ್ಕೂರು, ಡಿ.ರಾಫೂರು, ಬೂರ್ದಿಪಾಡ, ಅಗ್ರಹಾರ ಗ್ರಾಮಸ್ಥರು ನಲುಗಿ ಹೋಗಿದ್ದಾರೆ. ನಡುಗಡ್ಡೆಯಲ್ಲಿರುವ ಡಿ.ರಾಂಪೂರ, ಬೂರ್ದಿಪಾಡ ಗ್ರಾಮಗಳ ರೈತರು ಕಂಗೆಟ್ಟುಹೋಗಿದ್ದಾರೆ. ಈ ಸ್ಥಳಗಳಿಗೆ ಶುಕ್ರವಾರ ಕಾಂಗ್ರೆಸ್​ ನಾಯಕ ಈಶ್ವರ್ ಖಂಡ್ರೆ ಆಗಮಿಸಿ ರೈತರ ಸಂತ್ರಸ್ತರ ಗೋಳು ಕೇಳಿ ಹೋಗಿದ್ದರು. ಅದು ಕಾಟಾಚಾರದ ಗೋಳು ಎಂದು ರೈತರು ಆರೋಪಿಸಿದ್ದಾರೆ.

facebook post
ಫೇಸ್​ಬುಕ್​ ಪೋಸ್ಟ್​

ನೆರವಿಗೆ ಬರುತ್ತಾ ತೆಲುಗು ಸಿನಿಮಾ ರಂಗ: ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಗಡಿ ಜಿಲ್ಲೆಯಾದ ರಾಯಚೂರಿನಲ್ಲಿ ತೆಲುಗು ಸಿನಿಮಾಗಳ ಪ್ರಭಾವ ಹೆಚ್ಚಾಗಿದೆ. ಇಲ್ಲಿ ತೆಲುಗಿನ ಹೆಸರಾಂತ ನಟರ ಸಿನಿಮಾಗಳಿಗೆ ಅದ್ಧೂರಿಯಾಗಿ ಸ್ವಾಗತ ಕೋರುತ್ತಾರೆ. ಆದರೀಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಕೃಷ್ಣಾ ನದಿಯ ಪ್ರವಾಹದಿಂದ ನಲುಗಿ ಹೋಗಿದೆ. ಅದರಂತೆ ಕನ್ನಡದ ಚಿತ್ರರಂಗ ನೆರವಿಗೆ ಧಾವಿಸಿದೆ. ಆದರೆ, ತೆಲುಗು ಸಿನಿಮಾ ರಂಗ ನೆರವಿಗೆ ಬರುತ್ತದೋ ಇಲ್ಲವೋ ನೋಡೋಣ ಎಂದು ಫೇಸ್​ಬುಕ್​​ನಲ್ಲಿ ಮಾಡಿರುವ ಪೋಸ್ಟ್​ ವೈರಲ್​ ಆಗಿದೆ.

Intro:Body:

raichur flood

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.