ETV Bharat / state

ರಾಯಚೂರು: ವಿದ್ಯುತ್ ತಂತಿ ತಗುಲಿ ರೈತ ಸಾವು - Death of a Raichur farmer

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಬೂರನಪುರ ಗ್ರಾಮದ ಬಳಿ ವಿದ್ಯುತ್‌ ತಂತಿ ತಗುಲಿ ರೈತನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Raichur: Farmer died of electric shock
ರಾಯಚೂರು: ವಿದ್ಯುತ್ ತಂತಿ ತಗುಲಿ ರೈತ ಸಾವು
author img

By

Published : May 6, 2020, 12:56 PM IST

ರಾಯಚೂರು: ವಿದ್ಯುತ್‌ ತಂತಿ ತಗುಲಿ ರೈತನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಮಾನವಿ ತಾಲೂಕಿನ ಬೂರನಪುರ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ. ಬಾಬು ಮಹೆಬೂಬು(45) ಮೃತ ರೈತ. ಬಾಬು 4 ಎಕರೆ ಜಮೀನು ಹೊಂದಿದ್ದು, ಕೆಲಸಕ್ಕಾಗಿ ತನ್ನ ಹೊಲಕ್ಕೆ ತೆರಳಿದ್ದ. ಈ ವೇಳೆ ಮಳೆ, ಗಾಳಿಗೆ ಕೆಳಗೆ ಬಿದಿದ್ದ ವಿದ್ಯುತ್ ತಂತಿ ತಗುಲಿ ಅದರ ಹೊಡೆತಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಮಾನವಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.