ರಾಯಚೂರು: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಖಾಲಿಯಿರುವ ಡಿ ಗ್ರೂಪ್ ನೌಕರರು, ಶುಶ್ರೂಷಕರು ಸೇರಿದಂತೆ ವಿವಿಧ ಹುದ್ದೆಗಳಿಗೆ 6 ತಿಂಗಳ ಮಟ್ಟಿಗೆ ಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಉದ್ಯೋಗಾಕಾಂಕ್ಷಿಗಳು ಕೋವಿಡ್ ನಿಯಮ ಉಲ್ಲಂಘಿಸಿದ ಘಟನೆ ನಡೆದಿದೆ.
ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ತಮ್ಮ ಸ್ವವಿವರಗಳೊಂದಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಲಾಖೆ ಎದುರು ಆಗಮಿಸಿದ್ದ ನೂರಾರು ಅರ್ಜಿದಾರರು ಸಾಮಾಜಿಕ ಅಂತರವನ್ನೇ ಮರೆತು ಅಂಟಿಕೊಂಡು ನಿಂತಿದ್ದರು. ಕೊರೊನಾ ನಿಯಂತ್ರಿಸಲು ನೇಮಿಸಿಕೊಳ್ಳಲಾಗುತ್ತಿರುವ ಇವರೇ ಎಚ್ಚರಿಕೆ ಇಲ್ಲದಂತೆ ವರ್ತಿಸಿರುವುದು ಕಂಡುಬಂತು.
ಇಲಾಖೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸಲು ಬರುವವರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ, ಕೆಲವರು ನಿಯಮಗಳನ್ನು ಪಾಲಿಸಿದ್ರೆ, ಇನ್ನೂ ಕೆಲವರು ಇದ್ಯಾವುದನ್ನು ಲೆಕ್ಕಿಸದೇ ವರ್ತಿಸಿರುವುದು ಕಂಡುಬಂದಿದೆ.