ರಾಯಚೂರು: ಮಾರಣಾಂತಿಕ ಹಲ್ಲೆ ನಡೆಸಿ ಪರಾರಿ ಮೂವರು ಪ್ರಯಾಣಿಕರನ್ನು ಬಂಧಿಸಿ, ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಆಂದ್ರ ಮೂಲದ ಮೂವರನ್ನು ಸಿರವಾರ ಪಟ್ಟಣದಲ್ಲಿ ಬಂಧಿಸಲಾಗಿದೆ.
ಬಂಧಿತ ಮೂವರನ್ನು ವಿಚಾರಿಸಿದ್ದು, ತಾವು ವಾಹನದಲ್ಲಿ ಮಲಗಿದ್ದೇವು. ಘಟನೆ ಹೇಗೆ ನಡೆಯಿತು ಎಂಬುದು ತಿಳಿದಿಲ್ಲ. ಚಾಲಕ ಪೊಲೀಸರು ವಾಹನ ತಡೆಯುತ್ತಿದ್ದಂತೆ ಪರಾರಿ ಆಗಿದ್ದಾನೆ ಎಂದು ಬಂಧಿತರು ತಿಳಿಸಿದ್ದಾರೆ.
ಮಾರಣಾಂತಿಕ ಹಲ್ಲೆಯಿಂದ ಗಾಯಗೊಂಡಿದ್ದ ಬಾಗಲವಾಡ ಉದಯಕುಮಾರ ಕುಟುಂಬ ದೂರು ನೀಡದೆ ತಟಸ್ಥವಾಗಿದ್ದಾರೆ. ಮುಂದೆನು ಎಂಬುದು ಪೊಲೀಸರಿಗೆ ಸವಾಲಾಗಿದೆ. ಪರಾರಿ ಆದ ಚಾಲಕನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.