ETV Bharat / state

ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ ಡಿಸಿ ಆರ್.ವೆಂಕಟೇಶ್ ಕುಮಾರ್ - ಕಾಮಗಾರಿಗಳನ್ನು ವೀಕ್ಷಣೆ ಮಾಡಿದ ರಾಯಚೂರು ಡಿ.ಸಿ

ರಾಯಚೂರು ನಗರದ ನಾನಾ ಕಡೆ ಸಂಚಾರಿಸಿದ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್, ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.

ಡಿಸಿ ಆರ್.ವೆಂಕಟೇಶ್
ಡಿಸಿ ಆರ್.ವೆಂಕಟೇಶ್
author img

By

Published : Sep 18, 2020, 11:45 PM IST

ರಾಯಚೂರು: ನಗರದ ಮಚ್ಚಿ ಬಜಾರ್‌ನಿಂದ ಅಶೋಕ್ ಡಿಪೋವರೆಗಿನ 60 ಅಡಿ ರಸ್ತೆ ಅಗಲೀಕರಣದ ಕಾರ್ಯಚರಣೆ ನಡೆಸಿ, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಇಂದು ನಗರದ ನಾನಾ ಕಡೆ ಸಂಚಾರಿಸಿದ ಜಿಲ್ಲಾಧಿಕಾರಿಗಳು, ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ಮಚ್ಚಿ ಬಜಾರ್‌ನಿಂದ ಅಶೋಕ್ ಡಿಪೋವರೆಗೆ ರಸ್ತೆಯ ಸ್ಥಿತಿಗತಿಯನ್ನು ಪರಿಶೀಲಿಸಿದರು. ಕೊರೊನಾದಿಂದ ಬಂದ್​​ ಆಗಿದ್ದ ಉಸ್ಮಾನೀಯ ತರಕಾರಿ ಮಾರುಕಟ್ಟೆಯಲ್ಲಿ ಬಾಕಿಯಿರುವ ಕೆಲ ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಮಾಹಿತಿ ಪಡೆದು, ಮಾರುಕಟ್ಟೆಯ ಪುನಃ ಆರಂಭಿಸಲು ಅಗತ್ಯ ಸ್ಪಚ್ಛತಾ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಬಳಿಕ ಮಂತ್ರಾಲಯ ರಸ್ತೆಯಲ್ಲಿರುವ ರಾಜ್ಯ ಕ್ರಿಕೆಟ್ ಅಶೋಷಿಯೇಷನ್ ವತಿಯಿಂದ ನಿರ್ಮಿಸಲ್ಪಡುತ್ತಿರುವ ಕ್ರೀಡಾಂಗಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ 12 ಎಕರೆ ಜಮೀನು ಕಾಯ್ದಿರಿಸಲಾಗಿದೆ. ಪೆವಿಲಿಯನ್, ಪ್ರವೇಶ ದ್ವಾರ ನಿರ್ಮಾಣ ಸೇರಿದಂತೆ ಇನ್ನಿತರ ಕೆಲಸಗಳಿಗೆ ಗುಡ್ಡ ಅಡ್ಡಿಯಾಗಿದ್ದು, ಅದನ್ನು ತೆರವುಗೊಳಿಸಲು ಮತ್ತೊಮ್ಮೆ ಸರ್ವೆ ಮಾಡುವಂತೆ ಸೂಚಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.