ETV Bharat / state

ಕೊರೊನಾ ವೈರಸ್ ಎಫೆಕ್ಟ್: ಜಿಲ್ಲಾಧಿಕಾರಿಯಿಂದ ತುರ್ತು ಸಭೆ - coronavirus fear in Raichur,

ಕೊರೊನಾ ವೈರಸ್ ಪರಿಣಾಮ ಜಿಲ್ಲಾಧಿಕಾರಿ ತುರ್ತು ಸಭೆ ನಡೆಸಿದರು.

coronavirus fear, coronavirus fear in Raichur, DC meeting held for coronavirus, ಕೊರೊನಾ ವೈರಸ್​ ಆತಂಕ, ರಾಯಚೂರಿನಲ್ಲಿ ಕೊರೊನಾ ವೈರಸ್​ ಆತಂಕ, ಕೊರೊನಾ ವೈರಸ್​ ಸಂಬಂಧ ಡಿಸಿ ಸಭೆ,
ಜಿಲ್ಲಾಧಿಕಾರಿಯಿಂದ ತುರ್ತು ಸಭೆ
author img

By

Published : Mar 4, 2020, 8:27 PM IST

ರಾಯಚೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ರಾಯಚೂರು ಜಿಲ್ಲಾಧಿಕಾರಿ ವಿವಿಧ ಇಲಾಖಾ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು.

ಆರೋಗ್ಯ ಇಲಾಖೆ, ರಿಮ್ಸ್ ಆಸ್ಪತ್ರೆ, ಆರ್ ಟಿಒ, ಅಬಕಾರಿ, ಸ್ಥಳೀಯ ನಗರಸಭೆ, ಪುರಸಭೆ ಅಧಿಕಾರಿಗಳು, ತಹಶೀಲ್ದಾರ್​ಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಜೊತೆ ಡಿಸಿ ತುರ್ತು ಸಭೆ ಕರೆದು, ಕೊರೊನಾ ವೈರಸ್ ಕುರಿತಂತೆ ಕೈಗೊಳಬೇಕಾದ ಮುಂಜಾಗ್ರತ ಕ್ರಮಗಳು ಮತ್ತು ಜನರಲ್ಲಿ ಕೊರೊನಾ ವೈರಸ್​ ಬಗ್ಗೆ ಅರಿವು ಮೂಡಿಸುವುದರ ಕುರಿತಂತೆ ಚರ್ಚೆ ನಡೆಸಿದ್ರು.

ಜಿಲ್ಲಾಧಿಕಾರಿಯಿಂದ ತುರ್ತು ಸಭೆ

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ವೆಂಕಟೇಶ ಕುಮಾರ್, ಹೈದರಾಬಾದ್​ನಲ್ಲಿ ವೈರಸ್ ಕಂಡು ಬಂದಿದೆ. ರಾಯಚೂರು ಜಿಲ್ಲೆಯಿಂದ ಹೈದರಾಬಾದ್​ಗೆ ಹಲವು ಜನರು ಸಂಚಾರ ಮಾಡುತ್ತಾರೆ. ಸೋಂಕು ಹರಡದಂತೆ ಗಡಿ ಭಾಗದಲ್ಲಿ ಮೂರು ಚೆಕ್ ಪೋಸ್ಟ್​ಗಳು, ಕೇಂದ್ರೀಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ಕೇಂದ್ರ ಸ್ಥಾಪಿಸಲಾಗುವುದು ಎಂದರು.

ಅಬಕಾರಿ, ಆರ್​ಟಿಒ, ಪೊಲೀಸ್ ಚೆಕ್ ಪೋಸ್ಟ್​ಗಳಲ್ಲಿ ಆರೋಗ್ಯ ತಪಾಸಣೆ ನಡೆಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಸೋಂಕು ಕಂಡು ಬಂದಲ್ಲಿ ಚಿಕಿತ್ಸೆ ನೀಡಲು ರಿಮ್ಸ್ ಆಸ್ಪತ್ರೆ ಹಾಗೂ ನವೋದಯ ಆಸ್ಪತ್ರೆಯಲ್ಲಿ ತಲಾ ಐದು ಬೆಡ್​ಗಳು ಮತ್ತು ಕೊರೊನಾ ವೈರಸ್ ಚಿಕಿತ್ಸೆ ಘಟಕಗಳನ್ನ ಸ್ಥಾಪಿಸಲಾಗಿದೆ ಎಂದು ವಿವರಿಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.