ರಾಯಚೂರು : ಕೊರೊನಾ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಖಾಸಗಿ ಆಸ್ಪತ್ರೆ ಸಹಯೋಗಕ್ಕೆ ಮುಂದಾಗಿದೆ. ನಗರದ ಅಮರೇಶ್ವರ ಆಸ್ಪತ್ರೆಯು ಕೊರೊನಾ ಆಸ್ಪತ್ರೆಯಾಗಿ ಸೇವೆ ನೀಡಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾದ್ಯಕ್ಷ ಡಾ. ಮಾಹಲಿಂಗಪ್ಪ ಹೇಳಿದರು.
ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿದಿನ ಕೊರೊನಾ ಪ್ರಕರಣ ಹೆಚ್ಚಾಗುತ್ತಿವೆ. ಜಿಲ್ಲಾಡಳಿತ ಸಹಯೋಗದಲ್ಲಿ ಕಳೆದ ತಿಂಗಳು ನಗರದ ಎರಡು ಖಾಸಗಿ ಆಸ್ಪತ್ರೆಗೆ ಕೊರೊನಾ ತಪಾಸಣೆಗೆ ಅನುಮತಿ ನೀಡಿತ್ತು. ಇಂದು 30 ಹಾಸಿಗೆಯ ಅಮರೇಶ್ವರ ಆಸ್ಪತ್ರೆಗೆ ಕೊರೊನಾ ತಪಾಸಣೆಗೆ ಅನುಮತಿ ನೀಡಲಾಗಿದೆ.
ನಗರ ಸೇರಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿವೆ. ಅದನ್ನ ತಡೆಗಟ್ಟಲು ಜನ ಸರ್ಕಾರ ಸೂಚಿಸಿದ ಮುಜಾಗೃತಾ ಕ್ರಮಗಳನ್ನು ಅನುಸರಿಸಬೇಕು. ನಗರದಲ್ಲಿರುವ ಎರಡು ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಲ್ಲಿ 170ಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆದು ಗುಣ ಮುಖರಾಗಿದ್ದಾರೆ.
ಸರ್ಕಾರ ಸೂಚಿಸಿದ ದರದಲ್ಲೇ ನಾವು ಚಿಕಿತ್ಸೆ ನೀಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಡಾ.ಅಜೀತ್ ಕುಲಕರ್ಣಿ, ಡಾ.ಅಮರಜೀತ್ ಪಾಟೀಲ, ಡಾ. ಇಫಾನ್, ಡಾ. ರಾಮಕೃಷ್ಣ ಸೇರಿ ಇತರರು ಉಪಸ್ಥಿತರಿದ್ದರು.