ETV Bharat / state

ಮಂತ್ರಾಲಯ: ರಾಯರ ದರ್ಶನ ಭಾಗ್ಯ ಇನ್ನಷ್ಟು ದಿನಗಳ ಕಾಲ ಮುಂದೂಡಿಕೆ

ಇಂದಿನಿಂದ ಭಕ್ತರಿಗೆ ರಾಯರ ಬೃಂದಾವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಈ ಹಿಂದೆ ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿತ್ತು. ಆದ್ರೆ ರಾಯರ ದರ್ಶನದ ಅವಕಾಶವನ್ನ ಇನ್ನಷ್ಟು ದಿನಗಳ ಕಾಲ ಮುಂದೂಡಲಾಗಿದೆ.

manthralaya
manthralaya
author img

By

Published : Jun 15, 2020, 10:41 AM IST

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಭಕ್ತರಿಗೆ ರಾಯರ ದರ್ಶನದ ಅವಕಾಶವನ್ನ ಇನ್ನಷ್ಟು ದಿನಗಳ ಕಾಲ ಮುಂದೂಡಲಾಗಿದೆ.

ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠ

ಇಂದಿನಿಂದ ಭಕ್ತರಿಗೆ ರಾಯರ ಬೃಂದಾವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಈ ಹಿಂದೆ ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮಂತ್ರಾಲಯದ ಶೀ ರಾಘವೇಂದ್ರ ಸ್ವಾಮಿ ಮಠಕ್ಕೆ ಬರುವ ಭಕ್ತರ, ಸಿಬ್ಬಂದಿ, ಸ್ಥಳೀಯ ಗ್ರಾಮಸ್ಥರ ಆರೋಗ್ಯದ ಹಿತದೃಷ್ಠಿ ಕಾಪಾಡುವುದು, ಇನ್ನಷ್ಟು ಸುರಕ್ಷತಾ ಕ್ರಮಗಳು ಕೈಗೊಳ್ಳುವುದು ಜೊತೆಗೆ ಅಧುನಾತನ ಪರಿಕರಗಳ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ.

raghavaendra math
ಶ್ರೀಮಠದ ಪ್ರಕಟಣೆ

ಹೀಗಾಗಿ ರಾಯರ ದರ್ಶನವನ್ನ ಇನ್ನೂ ಕೆಲ ದಿನಗಳ ಮುಂದೂಡಲಾಗಿದ್ದು, ರಾಯರ ದರ್ಶನಕ್ಕೆ ಅವಕಾಶ ಕಲ್ಪಿಸಿದ ಬಳಿಕ ಶ್ರೀಮಠದಿಂದ ಪ್ರಕಟಣೆಯಲ್ಲಿ ತಿಳಿಸಲಾಗುವುದು. ಅಲ್ಲಿಯವರೆಗೆ ಮಂತ್ರಾಲಯ ಪ್ರವಾಸವನ್ನ ಮುಂದೂಡುವಂತೆ ಶ್ರೀಮಠ ಭಕ್ತರಲ್ಲಿ ಮನವಿ ಮಾಡಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.