ETV Bharat / state

ರಾಯಚೂರು: ಪ್ರವಾಹದಲ್ಲಿ ಸಿಲುಕಿದ್ದ ಓರ್ವ ಬಾಲಕನ ರಕ್ಷಣೆ, ಇಬ್ಬರು ನೀರುಪಾಲು - ರಾಯಚೂರು ಸುದ್ದಿ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಂಡಲಬಂಡ ಜಲಪಾತದ ಪ್ರವಾಹದಲ್ಲಿ ಸಿಲುಕಿದ್ದ ಮಹಾಂತೇಶ ಎಂಬ ಬಾಲಕನನ್ನು ಸ್ಥಳೀಯ ಯುವಕರ ಸಹಾಯದಿಂದ ರಕ್ಷಿಸಲಾಗಿದ್ದು, ಇನ್ನಿಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

Protection of a boy caught in a flood
ಪ್ರವಾಹದಲ್ಲಿ ಸಿಲುಕಿದ್ದ ಓರ್ವ ಬಾಲಕನ ರಕ್ಷಣೆ...ಇಬ್ಬರು ನೀರು ಪಾಲು
author img

By

Published : Jul 23, 2020, 10:13 PM IST

ರಾಯಚೂರು: ಲಿಂಗಸುಗೂರು ತಾಲೂಕಿನ ಗುಂಡಲಬಂಡ ಜಲಪಾತದ ಪ್ರವಾಹದಲ್ಲಿ ಸಿಲುಕಿದ್ದ ಮಹಾಂತೇಶ ಎಂಬ ಬಾಲಕನನ್ನು ಸ್ಥಳೀಯ ಯುವಕರ ಸಹಾಯದಿಂದ ರಕ್ಷಿಸಲಾಗಿದ್ದು, ಇನ್ನಿಬ್ಬರು ಕೊಚ್ಚಿ ಹೋಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ತಿಳಿಸಿದ್ದಾರೆ.

ಪ್ರವಾಹದಲ್ಲಿ ಸಿಲುಕಿದ್ದ ಓರ್ವ ಬಾಲಕನ ರಕ್ಷಣೆ, ಇಬ್ಬರು ನೀರುಪಾಲು

ಗುಂಡಲಬಂಡ ಜಲಪಾತದ ಪ್ರವಾಹದಲ್ಲಿ ಸಿಲುಕಿದ್ದ ಮಹಾಂತೇಶ ಎಂಬ ಬಾಲಕನನ್ನು ಸ್ಥಳೀಯ ಈಜುಗಾರ ಹನುಮಂತಪ್ಪ ಎಂಬ ಯುವಕನ ಸಹಾಯದಿಂದ ರಕ್ಷಿಸಲಾಗಿದೆ. ಆದರೆ, ಕೃಷ್ಣ ನಾಯಕ, ಧನುಸ್ ಎಂಬುವವರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.

ಸಾರ್ವಜನಿಕರು ಮಳೆಗಾಲದ ಸಂದರ್ಭದಲ್ಲಿ ಇಂತಹ ಸ್ಥಳಗಳಿಗೆ ತೆರಳುವಾಗ ಎಚ್ಚರಿಕೆಯಿಂದಿರಬೇಕು. ಆಯ್ದ ಸ್ಥಳಗಳಲ್ಲಿ ಸೂಚನಾ ಫಲಕ ಹಾಕಲಾಗುವುದು. ಜನರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ನೀರಲ್ಲಿ ಕೊಚ್ಚಿ ಹೋದವರ ಬಗ್ಗೆ ಹುಡುಕಾಟ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.